ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಅಂಗವಾಗಿ ಗುರುವಾರ ನಡೆದ ಬ್ರಹತ್ ಶೋಭಾ ಯಾತ್ರೆ ಅದ್ದೂರಿಯಾಗಿ ಜರುಗಿತು.
ಶೋಬಾಯಾತ್ರೆಯಲ್ಲಿ ಹಿಂದೂ ಧರ್ಮದ ರಾಜ ಮಾರಾಜರು, ಶರಣರು, ಸಂತರು, ಮಹಾನ ನಾಯಕರು ವಿವಿದ ಸಮಾಜದ ದೇವರ ಮೂರ್ತಿಗಳ ಭಾವ ಚಿತ್ರಗಳೊಂದಿಗೆ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಶೋಭಾ ಯಾತ್ರೆಯಲ್ಲಿ ನಾಡ ದೇವಿ, ಭಾರತ ಮಾತೆ, ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣ ಪ್ರತಾಪ್ ಸಿಂಹ, ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚನ್ನಮ್ಮ, ಶರಣ ಅಣ್ಣ ಬಸವಣ್ಣ, ಡಾ. ಬಾಬಾ ಸಾಹೇಬ ಅಂಬೇಡ್ಕರ್, ಡೋಹರ ಕಕ್ಕಯ್ಯ, ಕ್ರಾಂತಿ ವೀರ ಬೆಳವಡಿ ಮಲ್ಲಣ್ಣ, ಮಡಿವಾಳ ಮಾಚಿದೇವ, ಜೇಡರ ದಾಸಿಮಯ್ಯ, ಜಗದ್ಗುರು ರೇಣುಕಾರ್ಯ, ನೋಲಿ ಚಂದಯ್ಯ, ವೀರ ದುರ್ಗಾದಾಸ ರಾಠೋಡ, ಅಂಬಿಗರ ಚೌಡಯ್ಯ, ಗಾಣದರೆವತೆ, ಮಹರ್ಷಿ ವಾಲ್ಮಿಕಿ, ಹೂಗಾರ ಮಾದಯ್ಯ, ಶ್ರೀರಾಮ, ಸ್ವಾಮಿ ವಿವೇಕಾನಂದ, ತುಳಜಾಪುರ ಅಂಬಾಭವಾನಿ, ವಿಶ್ವಕರ್ಮ, ಕೇತೇಶ್ವರ, ಜಗದ್ಗುರು ಶಂಕರಾಚಾರ್ಯ, ಸೇರಿದಂತೆ ಹಿಂದೂ ಧರ್ಮದ ಎಲ್ಲ ಸಮುದಾಯದ ರಾಜ ಮಾರಾಜರು, ಶರಣರು, ಮಾಹನ ನಾಯಕರ, ಭಾವ ಚಿತ್ರದೊಂದಿಗೆ ಹಿಂದೂ ಧರ್ಮದ ಎಲ್ಲ ಸಮುದಾಯದ ಜನರು ಪಾಲ್ಗೊಂಡಿದ್ದರು. ಗುರುವಾರ ಬೆಳಗ್ಗೆ 11 ಗಂಟೆಗೆ ಮೇನ ಬಜಾರ ದೇವಿ ಗುಡಿಯಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಯಂಕಾಲ 5 ಗಂಟೆಗೆ ಮೇನ ಬಜಾರ ದೇವಿ ಗುಡಿ ಹತ್ತಿರ ಆಗಮಿಸಿ ಮುಕ್ತಾಯಗೊಳಿಸಿದರು.
ನಂತರ ಬ್ರಹತ್ ವೇದಿಗೆಯಲ್ಲಿ ವಿಶೇಷ ಉಪನ್ಯಾಸ ಜರುಗಿತು.
ಹಿಂದೂ ಸಮಾವೇಶದ ಶೋಭಾ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಗ್ಯಾರಂಟಿ ಅನುಸ್ಥಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ ಮುಂಚೂಣಿಯಲ್ಲಿ ಇದ್ದು ವಿಶೇಷ ಗಮನ ಹರಿಸಿದರು.
ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಅದ್ಯಕ್ಷ ಜಿ.ಸಿ. ಪಶುಪತಿಮಠ, ಪಿ.ಟಿ. ಪಾಟೀಲ, ಬಾಬು ಬಿಜ್ಜರಗಿ, ರವಿ ವಾರದ, ಶಂಕತ ಹಳೆಮನಿ, ಶ್ರೀಮಂತ ದುದ್ದಗಿ, ಗುಂಡು ಮೇಲೆನಮನಿ, ಮಂಜು ಎಂಟಮಾನ, ಕಾಳು ಪತ್ತಾರ ಸೇರಿದಂತೆ ಎಲ್ಲ ಸಮುದಾಯದ ಮುಖಂಡರು, ಯುವಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

