ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೨೦೨೬-೨೭ ನೇ ಸಾಲಿನ ಬಜೆಟ್ ಸಂಪೂರ್ಣ ಬಡವರ, ರೈತರ ಮತ್ತು ರಾಜ್ಯದ ಅಭಿವೃದ್ದಿ ಪರವಾದ ಬಜೆಟ್ ಆಗಿದೆ. ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣಕ್ಕೆ ಹೆಚ್ಚು ಮಹತ್ವ ಈ ಬಾರಿ ಮೂಡಿಬಂದಿದೆ. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರು ರಾಜ್ಯದ ಜನತೆ ಈ ಬಾರಿಯ ಬಜೆಟೆಗೆ ಶಾಸಕ ಅಶೋಕ ಮನಗೂಳಿ ಸೈ ಎಂದಿದ್ದಾರೆ.
ಅದರಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಮೊದಲ ಬಾರಿಗೆ ಕಾರ್ಮಿಕ ಮಕ್ಕಳಿಗಾಗಿ ೬ನೇ ತರಗತಿಯಿಂದ ೧೨ನೇ ತರಗತಿಯ ವರೆಗೆ ಶ್ರಮಿಕ ವಸತಿ ಶಾಲೆ, ಪ್ರಗತಿ ಪಥ ಯೋಜನೆಯಡಿಯಲ್ಲಿ ಸಿಂದಗಿ ಮತಕ್ಷೇತ್ರದ ೩೦ಕೀಮಿ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಬಜೆಟ್‌ನಲ್ಲಿ ಅನುದಾನ ಮಂಜೂರಾಗಿದೆ, ಮತಕ್ಷೇತ್ರದ ಕೆಂಗನಾಳ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ, ಲೋಕೋಪಯೋಗಿ ಇಲಾಖೆಯ ಕೇಶಿಪ್ ಯೋಜನೆಯಡಿಯಲ್ಲಿ ಚಡಚಣ-ಇಂಡಿ-ಆಲಮೇಲ-ಗಾಣಗಾಪೂರ ಪಟ್ಟಣಕ್ಕೆ ಸೇರುವ ಸುಮಾರು ೧೧೫ಕೀಮಿ ಸೂಪರ್ ಪಾಸ್ಟ್ ರಸ್ತೆಯ ಅಭಿವೃದ್ದಿಗೆ ಟೆಂಡರ್ ಕರೆಯಲು ಅನುಮೋದನೆ ದೊರೆತಿದೆ. ಸಿಂದಗಿ ಮತಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ವ್ಯಾಪಕ ಕೊಡುಗೆ ಸಿಕ್ಕಂತಾಗಿದೆ ಕ್ಷೇತ್ರದ ಜನತೆಯ ಪರವಾಗಿ ಸರ್ಕಾರಕ್ಕೆ ಅಭಿನಂದೆನೆ ಸಲ್ಲಿಸುವುದರ ಜೊತೆಗೆ ಈ ಬಜೆಟ್ ರಾಜ್ಯದ ಅಭಿವೃದ್ದಿಯ ಪರ್ವವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದ್ದಾರೆ.

