ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸರ್ವ ಜನಾಂಗದ ಶ್ರೇಯೋಭಿವೃದ್ದಿಗೆ ಪೂರಕವಾಗಿರುವ ಡಬಲ್ ಗ್ಯಾರಂಟಿ ಬಜೆಟ್ ಇದಾಗಿದೆ ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಡಾಕ್ಟರ್ಸ್ ಸೆಲ್ ಅಧ್ಯಕ್ಷ ಡಾ ಸಮೀರ ಹಾದಿಮನಿ ಅಭಿಪ್ರಾಯ ಪಟ್ಟರು.
ಶುಕ್ರವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಣೆಯ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಸೇರಿದಂತೆ ಸರ್ವ ಇಲಾಖೆಗಳ ಅಭಿವೃದ್ಧಿಗೆ ಗ್ಯಾರಂಟಿ ನೀಡಿದ ಬಜೆಟ್ ಇದಾಗಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17817 ಕೋಟಿ ರೂಪಾಯಿ ಮೀಸಲು. ಕಲಬುರಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐವಿಎಫ್ ಕೇಂದ್ರ, ಇಲಾಖೆಯ ಖಾಲಿ ಹುದ್ದೆಗಳ ಭರ್ತಿ.
ಮನ್ರೇಗಾದ ಹೆಸರು ಕೇಂದ್ರ ಸರ್ಕಾರ ಬದಲಿಸಿದ್ದಕ್ಕೆ ರಾಜ್ಯದ ಎಲ್ಲ ಗ್ರಾಮಪಂಚಾಯತ ಗಳಿಗೆ ಮಹಾತ್ಮಾಗಾಂಧಿ ಗ್ರಾಮ ಪಂಚಾಯತಿ ಎಂದು ನಾಮಕರಣ ಮಾಡಿ ಮಹಾತ್ಮರಿಗೆ ಸಿದ್ಧರಾಮಯ್ಯನವರು ಗೌರವಸಲ್ಲಿಸಿದ್ದಾರೆ.
16 ವರ್ಷದ ಕೆಳಗಿನ ಮಕ್ಕಳಿಗೆ ಮೊಬೈಲ್/ ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವದ ಅರಿವಿಗೆ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣಾ ನಡೆಸುವ ಕುರಿತು ಬಜಟ್ ನಲ್ಲಿ ಉಲ್ಲೇಖಿಸಿರುವುದು ಅಭಿನಂದನೀಯವಾಗಿದೆ ಎಂದು ಡಾ.ಸಮೀರ ಹಾದಿಮನಿ ಅಭಿಪ್ರಾಯಪಟ್ಟಿದ್ದಾರೆ.

