ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಗ್ರಾಮೀಣ ಭಾಗದ ಬಡ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು 30 ವರ್ಷಗಳ ಹಿಂದೆ ಆರಂಬಿಸಿದ ಸಂಸ್ಥೆ ಇಂದು ಹೆಮ್ಮರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.
ಅವರು ಪಟ್ಟಣದ ಗ್ರಾಮೀಣ ಅಭಿವೃದ್ಧಿ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಬಾಗದ ಮಕ್ಕಳಿಗಾಗಿ ಆರಂಭಿಸಿದ ಈ ಸಂಸ್ಥೆ ಇಂದು ಪ್ರಾಥಮಿಕ ದಿಂದ ಪದವಿ ಮಹಾವಿದ್ಯಾಲಯದವರೆಗೆ ಒಂದೆ ಸಂಸ್ಥೆಯಲ್ಲಿ ಕಲಿಯುವಂತೆ ವ್ಯವಸ್ಥೆ ಮಾಡಲಾಗಿದೆ ಅದಕ್ಕೆ ಜನರ ಸಹಕಾರದಿಂದ ಈ ಮಟ್ಟಕ್ಕೆ ಬೆಳದಿದೆ ಎಂದು ಹೆಳಿದರು ಎಂದರು. ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರೆ ಶಿಕ್ಷರಷ್ಟೆ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೆತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಿದರು.
ರಾಂಪೂರದ ನಿತ್ಯಾನಂದ ಮಹಾರಾಜರು ಸಾನಿದ್ಯ ವಹಿಸಿದ್ದರು. ಮುಖ್ಯ ಶಿಕ್ಷಕ ಜಿ.ಕೆ. ಅಂಬೂರೆ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್. ಪೂಜಾರ, ಕಾನಿಪ ಅಧ್ಯಕ್ಷ ಅವಧೂತ ಬಂಡಗಾರ, ಪಾಲಕ ಪ್ರತಿನಿದಿಗಳಾದ ಸೌದಾಗರ, ಮಾಡ್ಯಾಳ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಇದ್ದರು.
ಶಿಕ್ಷಕಿ ಕವಿತಾ ಪಶುಪತಿಮಠ ಸ್ವಾಗತಿಸಿದರು, ರೂಪಾ ಪಾಟೀಲ ನಿರೂಪಿಸಿ ವಂದಿಸಿದರು.

