ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತದ ಜನಗಣತಿ 2026ರ ಮನೆ ಪಟ್ಟಿ ಜನಗಣತಿ ಕಾರ್ಯಕ್ಕೆ ವಿಶೇಷ ಪ್ರಕರಣ ಹೊಂದಿರುವ ನೌಕರರಿಗೆ ಮತ್ತು ಶಿಕ್ಷಕರಿಗೆ ಮನೆ ಪಟ್ಟಿ ಹಾಗೂ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕೆಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸುರೇಶ ಶಡಶ್ಯಾಳ ಈಗಾಗಲೇ ವರ್ಗಾವಣೆಯಾದ ಶಿಕ್ಷಕರು, ವಿಶೇಷ ಚೇತನ ನೌಕರರಿಗೆ ಹಾಗೂ ಗರ್ಭಿಣಿ ಮಹಿಳಾ ನೌಕರರಿಗೆ ತೀವ್ರತರವಾದ ಕಾಯಿಲೆಯುಳ್ಳ ಸರ್ಕಾರಿ ನೌಕರರಿಗೆ, ಒಂದು ವರ್ಷದ ಮಗು ಇರುವ ಮಹಿಳಾ ನೌಕರರಿಗೆ ಈಗಾಗಲೇ ಬಿ. ಎಲ್. ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಶಿಕ್ಷಕರಿಗೆ 55 ವರ್ಷ ಮೀರಿದ ಪುರುಷ ನೌಕರರಿಗೆ, 50 ವರ್ಷ ಮೀರಿದ ಮಹಿಳಾ ನೌಕರರಿಗೆ ಭಾರತದ ಜನಗಣತಿ ಮನೆ ಪಟ್ಟಿ ಕಾರ್ಯಕ್ಕೆ ವಿನಾಯಿತಿ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ರಾಜ್ಯಉಪಾಧ್ಯಕ್ಷ ವಿಜಯಕುಮಾರ ಹತ್ತಿ, ಪ್ರಕಾಶ ಗೊಂಗಡಿ, ಸದಾನಂದ ತೇರದಾಳ, ಸಂತೋಷ ಜಹಾಗಿರದಾರ, ದಶರಥ ಸಲಗರಕರ, ಎಸ್. ಎಸ್. ಸೋನ್ನದ, ಪ್ರಕಾಶ ಡೊಬಳೆ, ನೀಜು ಮೆಲಿನಕೇರಿ ಮುಂತಾದವರು ಉಪಸ್ಥಿತರಿದ್ದರು.

