ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಸೃಷ್ಟಿಸಿದ ಗೃಹಲಕ್ಷ್ಮಿ ಯೋಜನೆ | ಪದವೀಧರರ ಪಾಲಿಗೆ ಆಶಾಕಿರಣ ಯುವನಿಧಿ ಯೋಜನೆ
ಲೇಖನ
– ಮಿಥುನ ಬನಸೋಡೆ
ಪ್ರ ಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ವಾಸ್ತವದಲ್ಲಿ ಕರುನಾಡು ಜನತೆಯ ಪಾಲಿಗೆ ವರದಾನವಾಗಿ ಹೊರಹೊಮ್ಮಿದ್ದು, ಗೃಹಲಕ್ಷ್ಮಿ ಯೋಜನೆಯಂತೂ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸೋಪಾನವಾಗಿದ್ದು, ಮಹಿಳಾ ಸಬಲೀಕರಣಕ್ಕೆ ನೈಜ ಶಕ್ತಿ ತುಂಬಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೊಳಿಸುವುದರ ಮೂಲಕ ರಾಜ್ಯದ ಶ್ರೀ ಸಾಮಾನ್ಯರಾದಿಯಾಗಿ ಎಲ್ಲ ವರ್ಗದ ಜನತೆಯ ಸಂಪ್ರೀತಿಗೆ ಪಾತ್ರರಾಗಿದ್ದಾರೆ.
2023 ರ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಜನತೆಗೆ ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದೇ ತಡ.
ಶಕ್ತಿ ಯೋಜನೆ
ಅದೇ ವರ್ಷದ ಜೂನ್ 11 ರಂದು ಶಕ್ತಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಯೋಜನೆ ಲೋಕಾರ್ಪಣೆಯಾಗುತ್ತಿದ್ದಂತೆಯೇ ಉತ್ತರ ಕರ್ನಾಟಕದ ಮಹಿಳೆಯರು ದಕ್ಷಿಣ ಕರ್ನಾಟಕಕ್ಕೆ, ದಕ್ಷಿಣ ಕರ್ನಾಟಕದ ಮಹಿಳೆಯರು ಉತ್ತರ ಕರ್ನಾಟಕಕ್ಕೆ ಶಕ್ತಿ ಯೋಜನೆಯಡಿ ಪ್ರವಾಸ ಕೈಗೊಳ್ಳುವ ಮೂಲಕ ಜೀವಮಾನದಲ್ಲೇ ನೋಡದ ರಾಜ್ಯದ ಐತಿಹಾಸಿಕ ಸ್ಥಳ, ದೇವಸ್ಥಾನಗಳನ್ನು ತಲುಪಿ, ಶಕ್ತಿ ದೇವತೆಗಳ ದರ್ಶನ ಪಡೆದಿದ್ದು ಇತಿಹಾಸ. ಈ ಶಕ್ತಿ ಯೋಜನೆಯಡಿ ರಾಜ್ಯದ ತುಂಬೆಲ್ಲ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುವ ಮೂಲಕ ಇಡೀ ಕರ್ನಾಟಕದ ದರ್ಶನ ಮಾಡಿದ್ದು ವಿಶೇಷ.
ಗೃಹ ಜ್ಯೋತಿ ಯೋಜನೆ
ಈ ಜಾರಿಗೊಳಿಸಲು
ತಡಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯಡಿ ರಾಜ್ಯ ಎಲ್ಲ ಕುಟುಂಬಗಳಿಗೆ ಗೃಹ ಬಳಕೆಯ 200 ಯೂನಿಟ್ ವರೆಗಿನ ವಿದ್ಯುತ್ ಉಚಿತವಾಗಿ ಪೂರೈಸುವ ಮೂಲಕ ಪ್ರತಿಯೊಬ್ಬರ ಮನೆ ಬೆಳಗುತ್ತಿರುವುದು ವಿಶೇಷ.
ಅನ್ನಭಾಗ್ಯ ಯೋಜನೆ
ನಂತರ 2023ರ ಜುಲೈ 1ರಂದು ಅನ್ನ ಭಾಗ್ಯ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ಯೋಜನೆಯಡಿ ಪ್ರತಿಯೊಬ್ಬರ ನೆಮ್ಮದಿಯ ಜೀವನಕ್ಕಾಗಿ ಬಿಪಿಎಲ್ ಫಲಾನುಭವಿಗಳಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ವಿತರಿಸುವ ಮೂಲಕ ಆಹಾರ ಭದ್ರತೆ ಸೌಲಭ್ಯ ಕಲ್ಪಿಸಿದ್ದರಿಂದ ಅದೆಷ್ಟೋ ಜನರ ಹಸಿವು ನೀಗಿಸುವ ಮೂಲಕ ಜನಸಾಮಾನ್ಯರ ಪಾಲಿಗೆ ಅನ್ನಭಾಗ್ಯ ಸಿದ್ದರಾಮಯ್ಯ ಎಂಬ ಬಿರುದಿಗೆ ಪಾತ್ರರಾಗುವ ಮೂಲಕ ಹಸಿವಿನಿಂದ ಬಳಲುತ್ತಿರುವವರ ಹಸಿವು ನೀಗಿಸುವ ಮೂಲಕ ಅವರ ಕಣ್ಣೀರೊರೆಸಿದ್ದು ಸಿದ್ದರಾಮಯ್ಯ ಅವರ ಅಂತಃಕರಣಕ್ಕೆ ಸಾಕ್ಷಿಯಾಗಿದೆ.
ಗೃಹಲಕ್ಷ್ಮೀ ಯೋಜನೆ
ನುಡಿದಂತೆ ನಡೆದುಕೊಳ್ಳುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರೇ ಸಾಟಿ. ಹಾಗಾಗಿ ನೀಡಿದ ವಾಗ್ದಾನದಂತೆ 2023 ರ ಜುಲೈನಲ್ಲಿ ಮಹಿಳೆಯರ ಪಾಲಿನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಎಂದೇ ಜನಜನಿತವಾದ
ಗೃಹ ಲಕ್ಷೀ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಸಂಖ್ಯಾತ ಮಹಿಳೆಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ಕೆಲವರು ಅದೇ ಹಣದಲ್ಲಿ ವ್ಯಾಪಾರ-ವಹಿವಾಟು ಆರಂಭಿಸುವ ಮೂಲಕ ಕುಟುಂಬಕ್ಕೆ ಆಧಾರವಾಗಿದ್ದಾರೆ.
ಈ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಸಹಾಯಧನವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಶಿಸ್ತಿನ ಪಾಠ ಹೇಳಿಕೊಟ್ಟರು.
ಈ ಯೋಜನೆಯ ಫಲಾನುಭವಿಗಳಾದ ಬಹುತೇಕ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಕ್ಕಳಿಗೆ ಪ್ರತಿಷ್ಠಿತ ಶಾಲಾ-ಕಾಲೇಜ್ ಗಳಲ್ಲಿ ಓದಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು. ಇನ್ನು ಕೆಲ ಮಹಿಳೆಯರು ಅದೇ ಹಣದಲ್ಲಿ ಇಡೀ ಕುಟುಂಬ ಮುನ್ಮಡೆಸುವ ಮೂಲಕ ಸ್ವಾವಲಂಬಿ ಹಾಗೂ ನೆಮ್ಮದಿಯ ಜೀವನ ನಡೆಸುವಂತಾಗಿದ್ದು, ಹೊಸ ಮೈಲುಗಲ್ಲು ಎಂದೇ ಹೇಳಲಾಗುತ್ತಿರುವುದು ವಿಶೇಷ.
ಯುವನಿಧಿ ಯೋಜನೆ
ಬಳಿಕ 2024 ರ ಜನವರಿ 12 ರಂದು ಮುಖ್ಯಮಂತ್ರಿಗಳು ಯುವ ನಿಧಿ ಯೋಜನೆ ಜಾರಿಗೊಳಿಸುವ ಮೂಲಕ ನಿರುದ್ಯೋಗಿ ಪದವೀಧರ ಯುವಕ-ಯುವತಿಯರಿಗೆ ಆಸರೆಯಾಗಿದ್ದಾರೆ.
2022-23 ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿ ಉದ್ಯೋಗ ಸಿಗದ ನಿರುದ್ಯೋಗಿ ಯುವ ಜನರಿಗೆ ಮಾಸಿಕ 3000 ರೂ. ಗಳನ್ನು ಹಾಗೂ ಡಿಪ್ಲೋಮಾ ವ್ಯಾಸಂಗ ಪೂರ್ಣಗೊಳಿಸಿ ಉದ್ಯೋಗ ಸಿಗದ ನಿರುದ್ಯೋಗಿ ಯುವ ಜನರಿಗೆ ಮಾಸಿಕ 1500 ರೂ.ಗಳ ನಿರುದ್ಯೋಗ ಭತ್ಯೆ ನೀಡಲಾಗುವ ಮೂಲಕ ಪದವೀಧರರ ತಾಪತ್ರಯ ನೀಗಿಸಿದ್ದು ವಿಶೇಷ.

ಜಿಲ್ಲೆಯ ಜನತೆಯ ಮನೆ ಮಾತಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ
ಇದೇ ಮಾದರಿಯಲ್ಲಿ ವಿಜಯಪುರ ಜಿಲ್ಲೆಯಲ್ಲೂ ಪಂಚ ಗ್ಯಾರಂಟಿ ಯೋಜನೆಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ, ಜಿಲ್ಲೆಯ ಜನತೆಗೆ ಮನೆ ಮಾತಾಗಿದ್ದಾರೆ.
ಈ ಯೋಜನೆಗಳಿಂದ ನಮ್ಮ ಜಿಲ್ಲೆಯಲ್ಲಿ 18,25,65,436 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು ಬಿಬಿಎಂಪಿ ಮಟ್ಟದಲ್ಲಿ ಬಿ.ಬಿ.ಎಂ.ಪಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಸಮಿತಿಗಳನ್ನು ರಚಿಸಿ ಅವರವರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ತಿಳಿಸಿದ್ದರಿಂದ ಬಹುತೇಕ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು ವಿಶೇಷ.
ಈ ಹಿನ್ನಲೆಯಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮತ್ತು 13 ತಾಲೂಕುಗಳಲ್ಲಿ 13 ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಅಸ್ತಿತ್ವದಲ್ಲಿರುತ್ತವೆ. ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದ ಬಗ್ಗೆ ಪರಾಮರ್ಶಿಸಲು ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ, ಪ್ರಗತಿ ಪರಿಶೀಲನೆ ಸಭೆ ಮಾಡಲು ತಿಳಿಸಿದ ಪ್ರಯುಕ್ತ ದಿನಾಂಕ: 21.02.2026 ರಂದು ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅದ್ಯಕ್ಷರು, ಉಪಾಧ್ಯಕ್ಷರುಗಳು ಜಿಲ್ಲೆಯ ಶಾಸಕರು ಭಾಗವಹಿಸಿದ್ದರು. ಅಲ್ಲದೆ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆದ ಫಲಾನುಭವಿಗಳು ಭಾಗವಹಿಸಿದ್ದರು.
ನಮ್ಮ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ಜನವರಿ 2026 ರವರೆಗೆ “ಶಕ್ತಿ ಯೋಜನೆಯಲ್ಲಿ: 17,99,34,366 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದು ಸಂಸ್ಥೆಗೆ ರೂ .607.93 ಕೋಟಿ ಆದಾಯ ಬಂದಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 4,46,616 ಫಲಾನುಭವಿಗಳಿಗೆ 538.15 ಕೋಟಿ, ಲಾಭ ತಲುಪಿದೆ. ಅನ್ನ ಭಾಗ್ಯ ಯೋಜನೆಯಲ್ಲಿ 16,55,941 ಫಲಾನುಭವಿಗಳಿಗೆ 457.03 ಕೋಟಿ, ಲಾಭ ತಲುಪಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 5,04,109 ಫಲಾನುಭವಿಗಳಿಗೆ 2385.89 ಕೋಟಿ ಮತ್ತು ಯುವ ನಿಧಿ ಯೋಜನೆಯಲ್ಲಿ 24,404 ಫಲಾನುಭವಿಗಳಿಗೆ 50.18 ಕೋಟಿ ಮೊತ್ತವನ್ನು ಡಿ.ಬಿ.ಟಿ ಮೂಲಕ ಫಲಾನುಭವಿಗಳಿಗ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.
ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ 18.25 ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಸಾಧ್ಯವಾಗಿದ್ದು ಸತ್ಯದ ಮಾತು.

