ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಂಧ್ರ ಪ್ರದೇಶದಲ್ಲಿ ಪ್ಯಾರಾ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ಆಯೋಜನೆ ಮಾಡಿದ್ದ ೧೪ನೇ ಹಿರಿಯರ ಪುರುಷರ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‌ಶಿಪ್ ಲೀಗ್‌ನಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈ ಆಟದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ದಿವ್ಯಾಂಗ ಕ್ರೀಡಾಪಟು ಯಮನಪ್ಪ ಶಂಕ್ರೆಪ್ಪ ದೊಡಮನಿ ಭಾಗಿಯಾಗಿ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಅಧ್ಯಕ್ಷ ಸತ್ಯ ನಾರಾಯಣ, ಪ್ಯಾರಾ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ವಿಜಯರಾವ್ ಶಿಂದೆ, ದಿವ್ಯಾಂಗ ಪ್ಯಾರಾ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ತರಬೇತುದಾರ ರಾಘವೇಂದ್ರ, ಸಿಂದಗಿ ತಾಪಂ ಕಚೇರಿಯ ಎಂ.ಆರ್.ಡಬ್ಲ್ಯೂ ಮುತ್ತುರಾಜ ಸಾತಿಹಾಳ ಸೇರಿದಂತೆ ಸಹಚರ ಆಟಗಾರರು ದಿವ್ಯಾಂಗ ಮಿತ್ರರು ಅಭಿನಂದಿಸಿದ್ದಾರೆ.

