ವಿಜಯಪುರದಲ್ಲಿ ಆಹಾರ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಹಳೆಯ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ,೪೧ ಗೃಹ ಬಳಕೆ ಸಿಲಿಂಡರ್ , ೨೧ ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ಹಾಗೂ ಗೋಲ್ ಗುಂಬಜ್ ಠಾಣೆ ಪಿಎಸ್‌ಐ ಎಮ್.ಡಿ.ಘೋರಿ, ಎಎಸ್‌ಆಯ್ ಎ.ಎ. ಹಾದಿಮನಿ, ಪೊಲೀಸ್ ಸಿಬ್ಬಂದಿಗಳಾದ ಗೋಪಾಲ ದಾಸರ, ಮಹಾದೇವ ಅಡಿಹುಡಿ, ಬಿ.ಬಿ. ಮಖನಾಪುರ, ಕುಶ ರಾಠೋಡ್, ಮಲ್ಲಿಕಾರ್ಜುನ ಚಾವರ್, ಮೌನೇಶ್ ನೆಲವಾಸಿ, ಅಪ್ಪು ಕೋಟ್ಯಾಳ ಭಾಗವಹಿಸಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

