ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಗುಬ್ಬೇವಾಡ ವಿದ್ಯುತ್ ವಿತರಣಾ ಕೇಂದ್ರದಿಂದ ಯಂಕಂಚಿ ವಿತರಣಾ ಕೇಂದ್ರದವರೆಗೆ ವೈಯರ್ ಎಳೆಯುವ ಕಾಮಗಾರಿ ಹಮ್ಮಿಕೊಂಡಿರುವ ಕೆವಿಪ್ರನಿನಿ ಯೋಜನೆ ಉಪವಿಭಾಗ-೨ರ ಗೋಲಗೇರಿ ೩೩ಕೆವ್ಹಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಿರುವುದರಿಂದ ಸದರಿ ೩೩/೧೧ಕೆವ್ಹಿ ಗೋಲಗೇರಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ೧೧ಕೆವ್ಹಿ ಮಾರ್ಗಗಳಲ್ಲಿ ಜ.೧೬ರಂದು ಮಧ್ಯಾಹ್ನ ೧೨:೦೦ ರಿಂದ ಸಾಯಂಕಾಲ ೦೫:೦೦ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
