ಮುಂಬರುವ ಜಯಂತಿಗೆ ಪುತ್ಥಳಿ ಅನಾವರಣ | ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭೋವಿ ಸಮಾಜದ ಬಹುದಿನದ ಬೇಡಿಕೆಯಂತೆ ಮುಂದಿನ ವರ್ಷ ಸಿದ್ಧರಾಮೇಶ್ವರ ಜಯಂತಿಗೆ ವೃತ್ತ ನಿರ್ಮಾಣ ಮತ್ತು ಪುತ್ಥಳಿ ಅನಾವರಣ ಮಾಡಿಕೊಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಸಿಂದಗಿ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶ ಶರಣ ಸಂತರ ನಾಡು. ಶರಣರು ಅನೇಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದಾರೆ. ಆದರೆ ಇಂದಿನ ಯುವಕರು ಶರಣರ ಸಂತರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಕೊಳ್ಳದೇ ಇರುವುದು ನೋವಿನ ಸಂಗತಿ. ಅವುಗಳನ್ನು ಇಂದಿನ ಜನಾಂಗಕ್ಕೆ ಉಪನ್ಯಾಸಗಳ ಮುಖೇನ ಪರಿಚಯಿಸುವ ಕಾರ್ಯವಾಗಬೇಕು. ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸಕ ಗಿರೀಶ ಕುಲಕರ್ಣಿ ಉಪನ್ಯಾಸ ನೀಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಮೂರನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮನುಜ ಮನುಕುಲಕ್ಕೆ ಉದ್ದಾರದ ಜೊತೆಗೆ ಪ್ರಾಣಿ, ಪಶು ಪಕ್ಷಿಗಳಿಗಾಗಿ ಅರವಟ್ಟಿಗಳನ್ನು ನಿರ್ಮಿಸಿದ ಕೀರ್ತಿ ಸಿದ್ಧರಾಮೇಶ್ವರಿಗೆ ಸಲ್ಲುತ್ತದೆ ಎಂದರು.
ತಹಶೀಲ್ದಾರ್ ಕರೆಪ್ಪ ಬೆಳ್ಳಿ ಸ್ವಾಗತಿಸಿದರು. ಭೋವಿ ಸಮಾಜ ತಾಲೂಕಾಧ್ಯಕ್ಷ ಪಂಡಿತ ಯಂಪುರೆ ಪ್ರಾಸ್ತಾವಿಕ ಮಾತನಾಡಿದರು. ಸರಕಾರಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಮುಖ್ಯಗುರು ಶರಣಬಸವ ಲಂಗೋಟಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಉಪ-ನೋದಣಾಧಿಕಾರಿ ಕಿರಣಕುಮಾರ ಹಂಪಿಹೊಳಿ, ಕಂದಾಯ ನೀರಿಕ್ಷಕ ಆಯ್.ಎ.ಮಕಾಂದಾರ, ಪುರಸಭೆ ಮಾಜಿ ಸದಸ್ಯ ಮಂಜುನಾಥ ಬಿಜಾಪುರ, ಬಸವರಾಜ ಯರನಾಳ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ತಾಲೂಕು ಕಸಾಪ ಅಧ್ಯಕ್ಷ ವಾಯ್.ಸಿ.ಮಯೂರ, ಮಹೇಶ ಮನಗೂಳಿ, ಗುರಣ್ಣಗೌಡ ಹುಮನಾಬಾದ, ಕುಮಾರ ದೇಸಾಯಿ, ಶಿವಾನಂದ ಹಚಡದ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಶಾಂತು ರಾಣಾಗೋಳ, ರಾಜಶೇಖರ ನರಗೋದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

