ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಸಂಕ್ರಮಣ ಎಂದರೆ ಕೂಡಿ ಬಾಳುವುದು ಎಂದರ್ಥ ಇಂದು ಎಳ್ಳು ಬೆಲ್ಲ ವಿತರಣೆಯೊಂದಿಗೆ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವ ಶ್ರೀ ಸಿದ್ಧೇಶ್ವರ ಜಾತ್ರೆಯ ವಿಶಿಷ್ಠ ಕಾರ್ಯಕ್ರಮವಾದ “ಹೋಮ ಹವನ” ದೇವಾಲಯದ ಆವರಣದ ಮುಂದೆ ಶ್ರೀ ಸಿದ್ಧೇಶ್ವರ ಸಂಸ್ಥೆ ವಿಜಯಪುರ ನಗರ ಶಾಸಕರಾದ ಬಸನಗೌಡ ರಾ. ಪಾಟೀಲ(ಯತ್ನಾಳ) ಇವರ ನೇತೃತ್ವದಲ್ಲಿ ಮಧ್ಯಾಹ್ನ ೧೨-೪೫ ಗಂಟೆಗೆ ಸಹಸ್ರಾರು ಭಕ್ತಾಧಿಗಳ ಮಧ್ಯೆ “ಹೋಮ ಹವನ” ಭಕ್ತಿ ಶ್ರದ್ಧೆಗಳಿಂದ ಮನಸೆಳೆಯಿತು ಶುದ್ದೋದಕರಿಂದ ಶುಚಿಗೊಳಿಸಿದ ಹೋಮ ಕಟ್ಟೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳಿಂದ ಸಿಂಗಾರಗೊಂಡಿತ್ತು ಆರ್ಘ್ಯ, ಪಾದ್ಯ ಆಚಮನಗಳೊಂದಿಗೆ ಅಭಿಷೇಕ ಸಲ್ಲಿಸಲಾಯಿತು.
ಚಂದನದ ಕಟ್ಟಿಗೆ ಎಳ್ಳುಧಾನ್ಯಗಳಿಂದ ಕೂಡಿದ ಕಟ್ಟೆಯ ಮೇಲೆ ಹಾವೇರಿ ಜಿಲ್ಲೆಯ ಫಕಿರಯ್ಯಾ ಶಾಸ್ತ್ರಿ, ಸಿದ್ಧರಾಮಯ್ಯಾಶಾಸ್ತ್ರಿ, ಬಸಯ್ಯಾಶಾಸ್ತ್ರಿ, ಬೂದಯ್ಯ ಹಿರೇಮಠ, ಷಢಕ್ಷರಯ್ಯ ಹಿರೇಮಠ, ನೇತೃತ್ವದಲ್ಲಿ ಹೋಮ ಹವನ ಕಾರ್ಯಕ್ರಮ ನೆರೆವೆರಿಯಿತು. ನಂತರ ನಗರ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿ ಹಾಗೂ ಪಡಿನಂದಿಕೋಲ ಮೇರವಣಿಗೆ ಜರುಗಿತು.
ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ, ಚೇರಮನ್‌ರಾದ ಬಸಯ್ಯಾ ಎಸ್. ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ ಜಂಟಿ ಕಾರ್ಯದರ್ಶಿ, ಎಂ.ಎಂ. ಸಜ್ಜನ ಕೋಶ್ಯಾಧ್ಯಕ್ಷರಾದ ಶಿವಾನಂದ ನೀಲಾ ಜಾತ್ರಾ ಸಮಿತಿಯ ಗುರು ಎಸ್. ಗಚ್ಚಿನಮಠ ಸೇರಿದಂತೆ ಹಲವರಿದ್ದರು.

