ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆಯಲ್ಲಿ ಸರ್ವರೂ ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಬಿಜೆಪಿ ಧುರೀಣ ಬಸನಗೌಡ ಪಾಟೀಲ (ಯಡಿಯಾಪೂರ) ಹೇಳಿದರು.
ಪಟ್ಟಣದಲ್ಲಿ ಪಟ್ಟಣದಲ್ಲಿ ಭೋವಿ ಸಮುದಾಯದಿಂದ ಆಚರಿಸಲಾದ ಶ್ರೀಸಿದ್ಧರಾಮೇಶ್ವರ ಜಯಂತಿಯಲ್ಲಿ ಪಾಲ್ಗೊಂಡು ನಂತರ ಸಮೀಪದ ಜಮಾದರ ಲೇಔಟ್‌ನಲ್ಲಿ ವೃತ್ತ ಉದ್ಘಾಟಿಸಿ ಮಾತನಾಡಿದರು.
ಶರಣ, ಮಹಾಪುರುಷ, ಸ್ವಾತಂತ್ರ್ಯಯೋಧರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಇಂದಿನ ಪರಿಪಾಠ ಬದಲಾಗಬೇಕು. ಎಲ್ಲ ಮಹಾನುಭಾವರ ಜಯಂತಿಗಳನ್ನು ಎಲ್ಲರೂ ಸೇರಿ ಆಚರಿಸುವಂತಾಗಲಿ ಎಂದರು.
ನೂತನ ಸಿದ್ದರಾಮೇಶ್ವರ ವೃತ್ತ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಅವೋಗೇಶ್ವರ ಧಾಮದಶ್ರೀ ವಹಿಸಿದ್ದರು.
ಸಿದ್ದಪ್ಪ ವಡ್ಡರ, ಜಗನ್ನಾಥ ಬರಟಗಿ, ಅರ್ಜುನ ಮಾನೆ, ಲಕ್ಷ್ಮಣ ವಡ್ಡರ, ರಾಜು ಆಲಕುಂಟೆ, ತಿಪ್ಪಣ್ಣ ವಡ್ಡರ ಸಹಿತ ಭೋವಿ ಸಮುದಾಯದ ಪ್ರಮುಖರು ಇದ್ದರು.

