ಸಂಸದ ರಮೇಶ ಜಿಗಜಿಣಗಿ ನೈಋತ್ಯ ರೈಲ್ವೇ ಜನರಲ್ ಮ್ಯಾನೇಜರ್ ಮುಕುಲ್ ಮಾಥುರ ಭೇಟಿ | ಮಹತ್ವದ ಚರ್ಚೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈಲ್ವೇ ನಿಲ್ದಾಣಗಳಲ್ಲಿಯೇ ಕೋಚ್ ನಿರ್ವಹಣೆ ಹಾಗೂ ತಪಾಸಣೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಪಿಟ್‌ಲೈನ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ರಮೇಶ ಜಿಗಜಿಣಗಿ ನೈಋತ್ಯ ರೈಲ್ವೇ ಜನರಲ್ ಮ್ಯಾನೇಜರ್ ಮುಕುಲ್ ಮಾಥುರ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ವಿಜಯಪುರದಲ್ಲಿಯೇ ಪಿಟ್ ಲೈನ್ ವ್ಯವಸ್ಥೆಯಾದರೆ ರೈಲ್ವೇ ಕೋಚ್‌ಗಳ ನಿರ್ವಹಣೆ, ತಪಾಸಣೆಗಾಗಿ ಬೇರೆ ಕಡೆ ಸಾಗಿಸುವುದು ತಪ್ಪುತ್ತದೆ, ಈಗಾಗಲೇ ಈ ಪಿಟ್‌ಲೈನ್ ವಿಜಯಪುರಕ್ಕೆ ಮಂಜೂರಾಗಿದೆ, ಹೀಗಾಗಿ ಕೂಡಲೇ ಈ ವ್ಯವಸ್ಥೆ ಆರಂಭಿಸಬೇಕು ಎಂದರು.
ರೈಲುಗಳ ಅಂಡರ್‌ಗೇರ್, ಬ್ರೇಕ್, ವಿದ್ಯುತ್ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಲು, ವಿವಿಧ ರೀತಿಯ ತಾಂತ್ರಿಕ ಪರೀಶೀಲನೆ ನಡೆಸಲು ಪಿಟ್‌ಲೈನ್ ವ್ಯವಸ್ಥೆ ವಿಜಯಪುರ ರೈಲ್ವೇ ನಿಲ್ದಾಣದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು. ಶೀಘ್ರದಲ್ಲಿಯೇ ಈ ಸೌಲಭ್ಯವನ್ನು ಸ್ಥಾಪಿಸುವಂತೆ ಸಂಸದ ಜಿಗಜಿಣಗಿ ಹೇಳಿದರು.
ರೈಲ್ವೇ ಹೋರಾಟಗಾರ ಅಶೋಕ ಹಳ್ಳೂರ ವಿಜಯ ಜೋಶಿ ಈ ವೇಳೆ ಉಪಸ್ಥಿತರಿದ್ದರು.

