ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಾಹಿತ್ಯ ಮತ್ತು ಗ್ರಂಥಗಳ ಅಧ್ಯಯನ ಮಾಡುವುದರಿಂದ ಒಬ್ಬ ಸಾಮಾನ್ಯ ಮನುಷ್ಯ ಅಸಾಮಾನ್ಯ ಸಾಧನೆ ಮಾಡಬಲ್ಲ ಎಂದು ಯುವಾ ಬ್ರಿಗೇಡ್ ವಿಭಾಗ ಸಂಚಾಲಕ ರಾಜು ಪಾಟೀಲ ಹೇಳಿದರು.
ಸಿಂದಗಿ ಮತಕ್ಷೇತ್ರದ ಕಡಣಿ ಗ್ರಾಮದ ಶ್ರೀ ಪರಮಾನಂದ ಭೊಗಲಿಂಗೇಶ್ವರ ಪಪೂ ಕಾಲೇಜಿನಲ್ಲಿ ಯುವಾ ಬ್ರಿಗೇಡ್ ವತಿಯಿಂದ ವಿವೇಕಾನಂದ ಜಯಂತಿ ನಿಮಿತ್ತ ಹಮ್ಮಿಕೊಂಡ ಅರಿವೇ ಗುರು ಕಾರ್ಯಕ್ರಮದಲ್ಲಿ ಕಾಲೇಜಿಗೆ ೨೦೦ ಪುಸ್ತಕ ಹಾಗೂ ಒಂದು ಟ್ರೇಜರಿ (ಖಜಾನೆ) ಯನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಈ ವೇಳೆ ಆಲಮೇಲ ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಿಪುತ್ರ ಕಿರಣಳ್ಳಿ, ಯುವಾ ಬ್ರಿಗೇಡ್ ವಿಭಾಗ ಸಹ ಸಂಚಾಲಕರು ಶಿವಮೂರ್ತಿ ಕಾಟಕರ ಪ್ರಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಲಾಳಸಂಗಿ, ಪ್ರಾಚಾರ್ಯರು ರಮೇಶ ಗಂಗನಳ್ಳಿ, ಮುಖ್ಯ ಗುರುಗಳು ಗಂಗನಳ್ಳಿ, ಜಿಲ್ಲಾ ಸಂಚಾಲಕ ಮಡಿವಾಳ ವಾಲಿಕಾರ, ಪರಶುರಾಮ ಭಜಂತ್ರಿ, ಶಿವರಾಜ ಜೋಗೂರ, ಪ್ರಭಾಕರ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.

