ಉದಯರಶ್ಮಿ ದಿನಪತ್ರಿಕೆ
ವಿಜಯಪುರ:. ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜ.೧೬ ರಿಂದ ಜ.೨೨ ರವರೆಗೆ ಮುಂಜಾನೆ ೭ ಗಂಟೆಗೆ ನವರಸಪುರದ ಎಲ್ಲ ಬಡಾವಣೆಗಳಲ್ಲಿ ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ಇವರಿಂದ (ದುಶ್ಚಟಗಳ ನಿರ್ಮೂಲನೆ) ಸದ್ಭಾವನಾ ಯಾತ್ರೆ ಹಾಗೂ ರುದ್ರಾಕ್ಷಿಧಾರಣ ಕಾರ್ಯಕ್ರಮ ಜರುಗಲಿದೆ.
ಪ್ರತಿ ದಿನ ಸಂಜೆ ೬ ಗಂಟೆಗೆ ಜಮಖಂಡಿಯ ಬಸವರಾಜೇಂದ್ರ ಶರಣರು ಇವರಿಂದ “ಬಸವಾದಿ ಶರಣರ ಜೀವನ-ಮೌಲ್ವಿಕ ಸಂದೇಶಗಳು” ಹಾಗೂ ವಿಜಯಪುರದ ಶಾರದಾಮಾತಾ ಆಶ್ರಮದ ಕೃಪಾಮಯಿ ಮಾತೆ ಇವರಿಂದ “ಸಾರ್ಥಕ ಬದುಕಿಗೆ ಅಧ್ಯಾತ್ಮಿಕ ಚಿಂತನೆಗಳು” ವಿಷಯ ಕುರಿತು ಪ್ರವಚನ ನಡೆಯಲಿದೆ.
ಈ ಸದ್ಭಾವನಾ ಯಾತ್ರೆ ಮತ್ತು ಪ್ರವಚನದಲ್ಲಿ ನವರಸಪುರದ ವಿವಿಧ ಬಡಾವಣೆಗಳ ಹಿರಿಯರು, ಮಹಿಳೆಯರು, ಮಕ್ಕಳು ಭಾಗವಹಿಸಲಿದ್ದಾರೆ ಎಂದು ಆಂಜನೇಯ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
