ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಚನಾತ್ಮಕ ಸಮಾರಂಭಗಳನ್ನು ಏರ್ಪಡಿಸುವ ಮೂಲಕ ಪುಣ್ಯಸ್ಮರಣೋತ್ಸವದ ಮೌಲ್ಯವನ್ನು ಹೆಚ್ಚಿಸಬೇಕೆನ್ನುವ ಉದ್ದೇಶದಿಂದ ಜ೧೯, ೨೦, ೨೧ ರಂದು ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಲಿಂ. ಹಾನಗಲ್ಲ ಕುಮಾರಸ್ವಾಮಿಗಳು, ತುಮಕೂರಿನ ಲಿಂ. ಡಾ.ಶಿವಕುಮಾರ ಸ್ವಾಮಿಗಳು, ವಿಜಯಪುರದ ಲಿಂ. ಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಮಡಿಕೇಶ್ವರದ ಲಿಂ. ಚನ್ನಣ್ಣ ದೇಸಾಯಿ ಇವರ ಸ್ಮರಣಾರ್ಥ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇಲ್ಲಿ ಯಾವುದೇ ರಾಜಕೀಯ ಹಾಗೂ ಸ್ವ-ಇಚ್ಛಾಸಕ್ತಿ ಇರುವದಿಲ್ಲ. ಬೇರೆ ಯಾರ ವೈಭವೀಕರಣವೂ ಇರಲ್ಲ. ಈ ಕಾರ್ಯಕ್ರಮಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದ ಕೂಡಿರಲಿದ್ದು, ಪ್ರತಿಯೊಬ್ಬರೂ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಜಿಲ್ಲಾ ಭಾಜಪಾ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು ಮಾತನಾಡಿ, ತಮ್ಮ ತಂದೆಯವರ ಪುಣ್ಯಸ್ಮರಣೆಯನ್ನು ಕೇವಲ ಒಂದು ತಾಸು ಅಥವಾ ಒಂದು ದಿನಕ್ಕೆ ಸೀಮಿತಗೊಳಿಸದೇ, ಪರಮ ಪೂಜ್ಯರ ಪುಣ್ಯ ಸ್ಮರಣೆಯೊಂದಿಗೆ ಆಚರಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಪ್ರಭುಗೌಡ ದೇಸಾಯಿ ಅವರ ಕಾರ್ಯ ಶ್ಲಾಘನೀಯ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜ೧೯ ರಿಂದ ಪುಣ್ಯ ಸ್ಮರಣೋತ್ಸವ, ಭಕ್ತ ಹಿತ ಚಿಂತನಾ ಸಭೆ, ವಿಶ್ವ ದಾಸೋಹ ದಿನಾಚರಣೆ, ರಾಷ್ಟಿçÃಯ ನಾಟಕೋತ್ಸವ, ವಿದ್ಯಾರ್ಥಿಗಳಿಗೆ ಸನ್ಮಾನ, ಪೌರಕಾರ್ಮಿಕರಿಗೆ, ಹಿರಿಯರಿಗೆ ಗೌರವ ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿವೆ. ಅರ್ಥಪೂರ್ಣವಾಗಿರುವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಕೋರಿದರು.
ಕಸಾಪ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ ಅವರು ಮಾತನಾಡಿ ಇಂತಹ ಮಾದರೀಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪ್ರಭುಗೌಡ ದೇಸಾಯಿಯವರ ಜೊತೆ ನಾವೆಲ್ಲರೂ ಸದಾ ಇರುತ್ತೇವೆ ಎಂದರು.
ಕಾರ್ಯಕ್ರಮಗಳ ಆಯೋಜಕರಾದ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ, ಕಮತಗಿಯ ಹುಚ್ಚೇಶ್ವರ ಮಹಾಸ್ವಾಮಿಗಳು, ಮಸೂತಿಯ ಪ್ರಭುಕುಮಾರ ಮಹಾಸ್ವಾಮಿಗಳು, ಗುಳೇದಗುಡ್ಡದ ಕಾಶಿನಾಥ ಮಹಾಸ್ವಾಮಿಗಳು, ಪಡೇಕನೂರದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಕುಂಟೋಜಿಯ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಮುಧೋಳದ ಖ್ಯಾತ ಶಸ್ತç ಚಿಕಿತ್ಸಕರಾದ ಶಿವಾನಂದ ಕುಬಸದ, ವಿಜಯಪುರದ ಡಿವೈಎಸ್‌ಪಿ ಬಸವರಾಜ ಎಲಿಗಾರ, ವಿಜಯಪುರದ ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಹಾಂತೇಶ ಬಿರಾದಾರ, ರಾಜ್ಯ ಸೌಹಾರ್ದ ಸಹಕಾರಿ ಮಹಾ ಮಂಡಳಿಯ ನಿರ್ದೇಶಕರಾದ ರಾಮನಗೌಡ ಪಾಟೀಲ ಮತ್ತು ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋದ್ದಾರ ಇವರುಗಳಿಗೆ ಸೇರಿದಂತೆ ಪೌರ ಕಾರ್ಮಿಕರಿಗೆ ಮತ್ತು ಹಿರಿಯರಿಗೆ ಗೌರವಿಸುತ್ತಿದ್ದೇವೆ. ಹಾಗಾಗಿ ಎಲ್ಲ ಬಂಧುಗಳು ಭಾಗಿಯಾಗಿವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವಿರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪ್ರಮುಖರಾದ ಮುತ್ತು ರಾಯಗೊಂಡ, ದೆವೇಂದ್ರ ವಾಲಿಕಾರ, ರಾಮನಗೌಡ ಶಿಕಳವಾಡಿ, ಅಮರೇಶ ಗೋಳಿ, ಸತೀಶ ಓಸ್ವಾಲ, ಸತೀಶ ಕುಲಕರ್ಣಿ, ಬಸವರಾಜ ನಾಲತವಾಡ, ಬಸವರಾಜ ಕೋರಿ, ರಾಜುಗೌಡ ಗೌಡರ, ಸಿ.ಪಿ.ಸಜ್ಜನ, ಶಿವು ದಡ್ಡಿ ವಕೀಲರು, ಸುನೀಲ ಇಲ್ಲೂರ, ಎಂ.ಡಿ.ಕುಂಬಾರ ವಕೀಲರು, ಪ್ರಕಾಶ ಹೂಗಾರ, ಬಾಪುಗೌಡ ಪಾಟೀಲ, ಭಗವದ್ಗೀತಾ ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ ಸೇರಿದಂತೆ ವೀರಶೈವ ಲಿಂಗಾಯತ ಸಮಾಜ, ಚಿನ್ಮಯ ಜೆ.ಸಿ ಗೆಳೆಯರ ಬಳಗ, ಹಸಿರು ತೋರಣ ಗೆಳೆಯರ ಬಳಗ, ಮನೆಯಲ್ಲಿ ಮಹಾಮನೆ ಬಳಗದವರು ಭಾಗಿಯಾದ್ದರು.

