Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ

ಯೋಗ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಿ :ಶಾಸಕ ಸವದಿ

ಬೆಳಗಾವಿ ಪೀಠದಲ್ಲಿ ನಿತ್ಯ ೧೦೦ ಅರ್ಜಿ ವಿಚಾರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೇಂದ್ರ ತಂಡದಿಂದ ನೈಸರ್ಗಿಕ ವಿಕೋಪ ಹಾನಿ-ಬೆಳೆಹಾನಿ ಸಮೀಕ್ಷೆ
(ರಾಜ್ಯ ) ಜಿಲ್ಲೆ

ಕೇಂದ್ರ ತಂಡದಿಂದ ನೈಸರ್ಗಿಕ ವಿಕೋಪ ಹಾನಿ-ಬೆಳೆಹಾನಿ ಸಮೀಕ್ಷೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲೆಯಲ್ಲಾದ ಮುಂಗಾರು ಹಂಗಾಮಿನ ಬೆಳೆ ಹಾನಿ ಹಾಗೂ ಪ್ರವಾಹ-ನೈಸರ್ಗಿಕ ವಿಕೋಪದಿಂದ ಜನ-ಜಾನುವಾರು-ಆಸ್ತಿ-ಪಾಸ್ತಿ ಹಾನಿಗಳ ಕುರಿತು ಪರಿಶೀಲನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾದ ಮಹೇಶಕುಮಾರ, ಇಸ್ರೋ ಬಾಹ್ಯಾಕಾಶ ಇಲಾಖೆಯ ಆಕಾಶ ಮೋಹನ್, ಬೆಂಗಳೂರಿನ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ಶ್ರೀಮತಿ ಹೊನ್ನಂಬ ಅವರನ್ನೊಳಗೊಂಡ ತಂಡ ಸೋಮವಾರ ವಿಜಯಪುರ ಜಿಲ್ಲೆಗೆ ಆಗಮಿಸಿ ಮುಂಗಾರು ಹಂಗಾಮಿನ ಬೆಳೆ ಹಾನಿ ಹಾಗೂ ಪ್ರವಾಹ-ನೈಸರ್ಗಿಕ ವಿಕೋಪದಿಂದ ಜನ-ಜಾನುವಾರು-ಆಸ್ತಿ-ಪಾಸ್ತಿ ಹಾನಿಗಳ ಕುರಿತು ಪರಿಶೀಲನೆ ನಡೆಸಿತು.
ಸೋಮವಾರ ವಿಜಯಪುರಕ್ಕೆ ಭೇಟಿ ನೀಡಿದ ತಂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡ, ಜಿಲ್ಲೆಯಲ್ಲಿ ಮುಂಗಾರಿನಲ್ಲಿ ೩೧೪೫೭೮ ಹೆಕ್ಟೇರ್ ಕೃಷಿ ಬೆಳೆ ಹಾಗೂ ೩೧೬೯೨ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ೩೫೬೬೫.೦೯ ಲಕ್ಷ ರೂ. ಕೃಷಿ ಬೆಳೆ ಹಾಗೂ ೪೪೫೩ ಲಕ್ಷ ರೂ.ಗಳ ತೋಟಗಾರಿಕೆ ಬೆಳೆ ಸೇರಿದಂತೆ ೪೦೧೧೮.೦೯ ಲಕ್ಷ ರೂ.ಗಳನ್ನು ಹಾನಿಯನ್ನು ಅಂದಾಜಿಸಲಾಗಿದೆ.
ಪ್ರವಾಹ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಕಳೆದ ಜೂನ-೦೧ ರಿಂದ ಸೆ.೩೦ರವರೆಗಿನ ಅವಧಿಯಲ್ಲಿ ೧೯೨೭೩೬ ಹೆಕ್ಟೇರ್ ಕಡಲೆ, ೪೫೬೩೨ ಹೇ. ಮೆಕ್ಕೆಜೋಳ, ೩೨೬೪ ಹೇ. ಸಜ್ಜೆ, ೬೬೯೯೪ ಹೇ.ಹತ್ತಿ, ೨೨೭೪ ಹೇ. ಸೂರ್ಯಪಾನ, ೨೩೧.೯ ಹೇ.ಹಸಿರು ಕಾಳು, ೫೬೮ ಹೇ. ಹೆಸರು ಬೆಳೆ, ೧೯೬೨.೯ ಹೇ.ಕಬ್ಬು, ೬ ಹೇ.ಸೋಯಾಬಿನ, ೯೦೯.೧೯ ಹೇ. ಶೇಂಗಾ ಬೆಳೆ ಸೇರಿದಂತೆ ಒಟ್ಟಾರೆ ೩೧೪೫೭೭.೫೯ ಹೇ. ಬೆಳೆ ನಾಶವಾಗಿದೆ.
ಪ್ರವಾಹ ಪರಿಸ್ಥಿತಿ ಸೇರಿದಂತೆ ನೈಸರ್ಗಿಕ ವಿಕೋಪದಿಂದ ೧೧೫.೦೭ ಕಿ.ಮೀ. ಪಿಡಬ್ಲೂಡಿ ರಸ್ತೆಗಳು ೨೯೩೯.೭೧ ಕಿ.ಮೀ. ಪಿಆರ್‌ಇಡಿ ರಸ್ತೆ, ೧೫೫೭.೬ ಮೀ. ವಿವಿಧ ಗ್ರಾಮಗಳ ಸೇತುವೆ, ಮೋರಿಗಳು, ೫೦೬ ಶಾಲೆ-ಅಂಗನವಾಡಿಗಳ ಕಟ್ಟಡ, ೦೧ ಪ್ರಾಥಮಿಕ ಆರೋಗ್ಯ ಕೇಂದ್ರ, ಸಣ್ಣ ನೀರಾವರಿ-ಜಿಲ್ಲಾ ಪಂಚಾಯತಿಯ ೧೧ ಟ್ಯಾಂಕ್‌ಗಳು, ಆರ್‌ಡಬ್ಲೂಎಸ್‌ನ ೬೧ ಕಾಮಗಾರಿಗಳು, ನಗರ ಹಾಗೂ ಗ್ರಾಮೀಣದ ೧೪೧೮ ಮನೆಗಳು ಹಾಗೂ ಹೆಸ್ಕಾಂ ಇಲಾಖೆಯ ೧೫೨೦ ಪೋಲ್ಸ್ ಮತ್ತು ಟ್ರಾನ್ಸ್ಫಾರ್ಮಗಳ ಹಾನಿ ಒಟ್ಟು ೩೬೪೨೭.೭೨ ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ.ಬೆಳೆ ಹಾನಿ ಹಾಗೂ ಇತರೆ ರಸ್ತೆ, ಮನೆಗಳು, ಶಾಲೆ-ಅಂಗನವಾಡಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ೭೬೫೪೫.೮೧ ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಳೆದ ೨೦೨೫ನೇ ಸಾಲಿನ ಏಪ್ರಿಲ್ ಮಾಹೆಯಿಂದ ಡಿಸೆಂಬರ್ ಮಾಹೆಯವರೆಗೆ ನೈಸರ್ಗಿಕ ವಿಕೋಪದಿಂದ ಜಿಲ್ಲೆಯಲ್ಲಿ ೧೧ ಮಾನವ ಹಾನಿ, ೭೦ ಜಾನುವಾರು, ಶೇ.೧೫ರಿಂದ೨೦ ವರೆಗಿನ ೧೩೨೯ ಮನೆಗಳು, ಶೇ.೨೦ರಿಂದ ೫೦ ವರೆಗಿನ ೫೯೨ ಮನೆಗಳು, ಶೇ.೫೦ ರಿಂದ ೭೫ ರವರೆಗಿನ ೬೪ ಮನೆಗಳು,೬೦೬ ಬಟ್ಟೆ-ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಚಡಚಣ ತಾಲೂಕಿನ ೮ ಗ್ರಾಮಗಳು, ಇಂಡಿ ತಾಲೂಕಿನ ೧೪ ಹಾಗೂ ಆಲಮೇಲ ತಾಲೂಕಿನ ೮ ಗ್ರಾಮಗಳು ಪ್ರವಾಹಕ್ಕೊಳಗಾಗಿದ್ದು, ಕೃಷಿ ನದಿ ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ ೯ ಗ್ರಾಮಗಳು, ನಿಡಗುಂದಿ ತಾಲೂಕಿನ ೫ ಹಾಗೂ ಬಬಲೇಶ್ವರ ತಾಲೂಕಿನ ೩ ಗ್ರಾಮಗಳು ಮತ್ತು ಡೋಣಿ ನದಿ ಪ್ರವಾಹದಿಂದ ತಿಕೋಟಾ ತಾಲೂಕಿನ ೩ ಗ್ರಾಮಗಳು, ವಿಜಯಪುರ, ಬಬಲೇಶ್ವರ ಹಾಗೂ ಬಸವನಬಾಗೇವಾಡಿ ತಾಲೂಕಿನ ತಲಾ ಒಂದು ಗ್ರಾಮಗಳು, ಹಾಗೂ ದೇವರಹಿಪ್ಪರಗಿ ತಾಲೂಕಿನ ೪ ಮತ್ತು ತಾಳಿಕೋಟೆ ತಾಲೂಕಿನ ೧೨ ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದು, ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಸುರಕ್ಷಿತವಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಇಂಡಿ ತಾಲೂಕಿನಲ್ಲಿ ೦೮ ಹಾಗೂ ಆಲಮೇಲ ತಾಲೂಕಿನಲ್ಲಿ ೦೯ ಸೇರಿದಂತೆ ಒಟ್ಟು ೧೭ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, ೨೨೦ ಕುಟುಂಬಗಳ ೧೦೨೭ ಜನರಿಗೆ ಆಶ್ರಯ ಒದಗಿಸಲಾಗಿದೆ ಎಂಬುದರ ಕುರಿತು ತಂಡ ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ ಪ್ರಶಾಂತ ಕಡಕಭಾವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪನಿರ್ದೇಶಕ ಚಂದ್ರಕಾಂತ ಪವಾರ, ಶರಣಗೌಡ ಪಾಟೀಲ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮಂಜುನಾಥ ಜಾನಮಟ್ಟಿ, ಇಂಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಮಠ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಎಸ್.ಎಸ್.ಕರಭಂಟನಾಳ, ಚಂದ್ರಕಾಂತ ಸೋರೇಗಾಂವ, ರೈತ ಮುಖಂಡರುಗಳಾದ ಅಣ್ಣಪ್ಪ ಖೈನೂರ, ಸುಧೀರ ಅಂಕೋಲೆ, ಸುಗಪ್ಪ ಶೆಟ್ಟಿ, ಮಹಾಸಿದ್ದ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಂಡದಿಂದ ಸ್ಥಳ ಭೇಟಿ-ಪರಿಶೀಲನೆ

ಸಭೆಯ ನಂತರ ಕೇಂದ್ರ ತಂಡ ಜಿಲ್ಲೆಯ ವಿಜಯುರ ತಾಲೂಕಿನ ಕನ್ನಾಳ ಗ್ರಾಮಕ್ಕೆ ಭೇಟಿ ನೀಡಿ ಭೀಮಾಶಂಕರ ಸ್ವಾಮೀಜಿಯವರ ಹೊಲದಲ್ಲಿನ ತೊಗರಿ ಬೆಳೆ ಹಾನಿಯನ್ನು ವೀಕ್ಷಣೆ ನಡೆಸಿತು. ಹೊರ್ತಿ ಗ್ರಾಮದ ಪರಗೊಂಡ ಮಲ್ಲಪ್ಪ ಅಂಕೋಲೆ ಅವರು ೫ ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾನಿಯನ್ನು ಪರಿಶೀಲನೆ ನಡೆಸಿತು. ನಂತರ ತಂಡ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಹಾನಿಗೊಳಗಾದ ಹೊರ್ತಿ ಕೆರೆ ವೀಕ್ಷಿಸಿ, ಈ ಕೆರೆಯಿಂದ ಸುಮಾರು ಒಂದು ಸಾವಿರ ಎಕರೆ ಭೂಮಿ ನೀರಾವರಿಗೊಳಪಡುವುದರಿಂದ ಕೆರೆ ದುರಸ್ತಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ೩.೬ ಕೋಟಿ ರೂ. ವೆಚ್ಚದಲ್ಲಿ ಕೆರೆ ದುರಸ್ತಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಿ ಕೆರೆ ದುರಸ್ತಿ ಕಾರ್ಯ ಕೈಗೊಂಡು ಕಾಮಗಾರಿಯನ್ನು ೩ ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದವರಿಗೆ ಸೂಚನೆ ನೀಡಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ

ಯೋಗ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಿ :ಶಾಸಕ ಸವದಿ

ಬೆಳಗಾವಿ ಪೀಠದಲ್ಲಿ ನಿತ್ಯ ೧೦೦ ಅರ್ಜಿ ವಿಚಾರಣೆ

ಕೇಂದ್ರ ಕಾರಾಗೃಹದಲ್ಲಿ ವಿಶ್ವ ಯೋಗ ದಿನಾಚರಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ
    In (ರಾಜ್ಯ ) ಜಿಲ್ಲೆ
  • ಯೋಗ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಿ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಬೆಳಗಾವಿ ಪೀಠದಲ್ಲಿ ನಿತ್ಯ ೧೦೦ ಅರ್ಜಿ ವಿಚಾರಣೆ
    In (ರಾಜ್ಯ ) ಜಿಲ್ಲೆ
  • ಕೇಂದ್ರ ಕಾರಾಗೃಹದಲ್ಲಿ ವಿಶ್ವ ಯೋಗ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಶುದ್ಧ ಕುಡಿವ ನೀರು ಪೂರೈಕೆಯಲ್ಲಿ ಯಾವುದೇ ಲೋಪವಾಗದಿರಲಿ
    In (ರಾಜ್ಯ ) ಜಿಲ್ಲೆ
  • ಕಬಿನಿ ಹಿನ್ನೀರಿಗೆ ತ್ಯಾಜ್ಯ ಸುರಿದರೆ ಕಾನೂನು ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರ ಕುಂದುಕೊರತೆ ಸಭೆ ಜೂ.೨೪ ಕ್ಕೆ ಮುಂದೂಡಿಕೆ
    In (ರಾಜ್ಯ ) ಜಿಲ್ಲೆ
  • ಮನುಷ್ಯನ ಒತ್ತಡದ ಬದುಕಿಗೆ ಯೋಗ ಅವಶ್ಯಕ :ಶೇಗುಣಸಿ
    In (ರಾಜ್ಯ ) ಜಿಲ್ಲೆ
  • ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ :ಪಿಎಸೈ
    In (ರಾಜ್ಯ ) ಜಿಲ್ಲೆ
  • ಯೋಗವು ಒಂದು ಸರ್ವ ಸಿದ್ದಿಸಾಧನ :ಉಷಾದೇವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.