ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ 2ನೇ ದಿನವಾದ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಿತು.
ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಾಗೂ ಜಾತ್ರಾ ಸಮಿತಿ ಸದಸ್ಯರು ಬಾನೆತ್ತರದ ನಂದಿ ಧ್ವಜಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಂದಿ ಧ್ವಜಗಳ ಉತ್ಸವಕ್ಕೆ ಚಾಲನೆ ದೊರೆಯಿತು.
ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ವೃತ್ತ, ಗಾಂಧಿ ಚೌಕ್, ಕಿರಾಣಿ ಬಜಾರ್, ಸರಾಫ್ ಬಜಾರ್, 770 ಲಿಂಗದ ಗುಡಿ ತಲುಪಿತು. ಅಲ್ಲಿಂದ ನೀಲಕಂಠೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ನಂದಿ ಧ್ವಜಗಳು ಮರಳಿ ಸಿದ್ದೇಶ್ವರ ದೇವಸ್ಥಾನ ತಲುಪಿತು. ಸಂಜೆ ಮಂಗಳ ವಾದ್ಯ, ರಾತ್ರಿ ಭಜನಾ ಭಜನಾ ಕಾರ್ಯಕ್ರಮಗಳು ಜರುಗಿದವು.
ಮೇಯರ್ ಎಂ.ಎಸ್. ಕರಡಿ, ಸಂಸ್ಥೆಯ ಉಪಾಧ್ಯಕ್ಷರಾದ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಿ.ಎಸ್.ಸುಗೂರ, ಎಂ.ಎಂ.ಸಜ್ಜನ, ಶಿವಾನಂದ ನೀಲಾ, ರಮೇಶ ಹಳ್ಳದ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಎಸ್.ಎಂ.ಪಾಟೀಲ, ಸುರೇಶ ಇಟ್ಟಗಿ, ಅಮೃತ ತೋಸನಿವಾಲ್, ಪಾಂಡು ಸಾಹುಕಾರ ದೊಡಮನಿ, ರಾಹುಲ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ಎಸ್.ಸಿ.ಉಪ್ಪಿನ, ಎಸ್.ಎಚ್.ನಾಡಗೌಡ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ನೀಲಾ, ಸಂತೋಷ ತಳಕೇರಿ, ವಿಠ್ಠಲ ಹೊಸಪೇಠ, ಮಾದೇವ ಜಂಗಮಶೆಟ್ಟಿ, ಮುತ್ತಪ್ಪ ಹಳ್ಳಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಲಕಪ್ಪಣ್ಣ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಎನ್.ಎಂ.ಗೋಲಾಯಿ, ಬಸವರಾಜ ಬಿರಾದಾರ, ರಾಜು ಕುರಿಯವರ, ರಾಜು ಗಣಿ, ಅನೀಲ ಸಬರದ, ವಿವೇಕ ಹುಂಡೇಕಾರ, ಶಂಕರ ಹೂಗಾರ, ನಂದು ಗಡಗಿ, ಶ್ರೀಶೈಲ ದೇವುರ, ಉಮೇಶ ಕೋರಿ, ಪ್ರವೀಣ ಬಿಜ್ಜರಗಿ. ಚಂದ್ರು ಚೌಧರಿ, ಶ್ರೀಶೈಲ ದೇವರ, ಶ್ರೀಕಾಂತ ಸಂಗೋಗಿ, ಈರಣ್ಣ ಪಾಟೀಲ, ವೀರೇಶ ಮುದಕಾಮಠ, ಶಶಿಧರ ಮುದಕಾಮಠ, ಸಿದ್ದಯ್ಯ ಹಿರೇಮಠ, ಈರಯ್ಯ ಗಣಕುಮಾರಮಠ, ಶಿವಾನಂದಯ್ಯ ಹಿರೇಮಠ ಸೇರಿದಂತೆ ಪ್ರಮುಖರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

