ಉದಯರಶ್ಮಿ ದಿನಪತ್ರಿಕೆ
ಚಡಚಣ: ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ಗುರು ನಮನ ಕಾರ್ಯಕ್ರಮವು ಚಡಚಣ ಪಟ್ಟಣದ ವಾರ್ಡ್ ನಂ. 15ರ ನೇಕಾರ ಕಾಲೋನಿಯಲ್ಲಿರುವ ಶ್ರೀ ಮರಡಿ ಮಹಾದೇವ ಗುಡಿ ಸಮೀಪ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ನೇಕಾರ ಕಾಲೋನಿಯ ತಾಯಂದಿರು ಹಾಗೂ ಸದ್ಭಕ್ತರು ಸ್ವಾಮೀಜಿಯವರ ಸ್ಮರಣೆಯಲ್ಲಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು, ಅವರ ಆದರ್ಶ ಜೀವನ, ವಚನಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಸ್ಮರಿಸಿದರು. ವಿಶೇಷ ಪೂಜೆ, ಭಜನೆ ಹಾಗೂ ಪ್ರಾರ್ಥನೆಗಳು ಜರುಗಿದವು.

