ಉದಯರಶ್ಮಿ ದಿನಪತ್ರಿಕೆ
ಪೂಜ್ಯರೇ..
ತಾವು ಕೆಲವು ವರುಷಗಳಿಂದ ವಚನ ಚಳುವಳಿ ಶರಣರ ಚಿಂತನ ಆಶಯಗಳಿಗೆ ವ್ಯತಿರಿಕ್ತವಾಗಿ ಮಾತ ಆಡುತ್ತಿರುವುದು ಕಂಡು ಬಂದಿದೆ. ಹಲವು ಬಾರಿ ತಾವು ಅಸಂವಿಧಾನ ಪದಗಳನ್ನು ಬಳಸಿ ಶರಣ ಸಂಸ್ಕೃತಿ ಬಸವ ಪರಂಪರೆಗೆ ನಿರಂತರ ಅವಮಾನ ಮಾಡುತ್ತಿದ್ದೀರಿ.
ವಚನಗಳ ಮೂಲ ಸ್ವರೂಪ ಮತ್ತು ಅರ್ಥವನ್ನು ವಿರೂಪಗೊಳಿಸುತ್ತಿದ್ದೀರಿ. ಬಹುಶಃ ನೀವು ವಚನ ಸಾಹಿತ್ಯದ ಮೌಲ್ಯವನ್ನು ಮತ್ತು ಅಧ್ಯಯನವನ್ನು ಇನ್ನೊಮ್ಮೆ ಅವಲೋಕನ ಮಾಡಿ.
ತಮ್ಮ ಗಮನಕ್ಕೆ ಈ ಕೆಳಗಿನ ಅಂಶಗಳು
1 )ಬಸವಣ್ಣ ಮತ್ತು ಶರಣರ ವಚನಗಳು ಅವೈದಿಕ ಮತ್ತು ಸನಾತನ ವ್ಯವಸ್ಥೆಯ ವಿರುದ್ಧ ಬಂಡೆದ್ದ ಸೈದ್ಧಾಂತಿಕ ಚಿಂತನೆಗಳು.
2 )ಸುಮಾರು 48 ವಚನಕಾರರು 468 ವಚನಗಳಲ್ಲಿ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ.
3) ಎಲ್ಲಾ ವೈದಿಕ ವ್ಯವಸ್ಥೆಯ ಆಚರಣೆಗಳನ್ನು ತಳ್ಳಿ ಹಾಕಿದ್ದಾರೆ
4)ತಾವು ಮೇಲಿಂದ ಮೇಲೆ ಬಸವಣ್ಣ ಹಿಂದೂ ಧರ್ಮದವನು ಹಿಂದೂ ಧರ್ಮದ ಉದ್ಧಾರಕ ಎಂದೆಲ್ಲಾ ನೀವು ನಿಮ್ಮ ಬಳಗ ಹೇಳುತ್ತಿದೆ. ಪೂಜ್ಯರೇ ತಾವು ಹಿಂದೂ ಪದವನ್ನು ಯಾವ ವೇದ ಆಗಮ ಶಾಸ್ತ್ರ ಭಗವದ್ಗೀತೆ ರಾಮಾಯಣ ಮಹಾಭಾರತ ಪುರಾಣಗಳಲ್ಲಿ ತೋರಿಸುತ್ತೀರಿ ಹೇಳಿ.
5) ಬಸವ ಭಕ್ತರು ಲಿಂಗಾಯತರು ತಾವು ಹಿಂದೂ ಎನ್ನದಿದ್ದರೆ ಜನರು ಬಡಿಗೆ ತೆಗೆದುಕೊಂಡು ಹೊಡೆಯುವರು ಎಂದೆನ್ನುತ್ತಾ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗುತ್ತಿದ್ದೀರಿ
6) ಹಿಂಸೆಗೆ ಪ್ರಚೋದನೆ ನೀಡುವ ನಿಮ್ಮ ಭಾಷಣ ತಮ್ಮಂತಹ ಸಾಧು ಸನ್ಯಾಸಿಗಳಿಗೆ ತರವಲ್ಲ
7) ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ಸಂವಿಧಾನ ಅನುಚೇದ 24 ರಿಂದ 30 ರ ವರೆಗೆ ನಮಗೆ ಒದಗಿಸಿ ಕೊಟ್ಟಿದೆ. ಅದನ್ನು ವಿರೋಧಿಸುವ ನಿಮ್ಮ ಕಾರ್ಯ ಕಾನೂನು ವಿರೋಧಿ ಕೆಲಸವಾಗುತ್ತದೆ.
8 ) ಮಹಾವೀರ ಬುದ್ಧ ಗುರುನಾನಕರು ಈ ಭಾರತದ ನೆಲದಲ್ಲಿ ತಮ್ಮ ತಮ್ಮ ಧಾರ್ಮಿಕ ಹಕ್ಕನ್ನು ಪಡೆದು ಮುಂದೆ ಸ್ವತಂತ್ರ ಧರ್ಮವೆನಿಸಿಕೊಂಡವು.
9) ಜನರ ಚಪ್ಪಾಳೆಗೆ ಸೀಳು ಕೂಗುವಿಕೆಗೆ ನೀವು ಬಲಿಯಾಗಿ
ನಮ್ಮ ಹೋರಾಟದ ಬಗ್ಗೆ ಅಸಭ್ಯವಾಗಿ ಮಾತನಾಡ ಬೇಡಿ. ಅದು ನಿಮಗೆ ಶೋಭೆಯಲ್ಲ
10) 2013 ಮತ್ತು 2014 ಜೈನರು ತಮ್ಮ ಧರ್ಮಕ್ಕೆ ಧಾರ್ಮಿಕ ಮಾನ್ಯತೆ ಅಲ್ಪ ಸಂಖ್ಯಾತ ಸ್ಥಾನಮಾನ ಪಡೆದುಕೊಂಡಾಗ ತಾವು ಎಲ್ಲಿ ಇದ್ದೀರಿ.?
11) ಮೂಲ ಕನ್ನೇರಿ ಶ್ರೀ ಕಾಡಸಿದ್ದೇಶ್ವರ ಶ್ರೀಗಳು ಬಸವ ಪರಂಪರೆಗೆ ಒಳಪಟ್ಟವರು. ಕನಿಷ್ಠ ಪಕ್ಷ ಶ್ರೀ ಕಾಡಸಿದ್ದೇಶ್ವರ ಅವರ ವಚನಗಳನ್ನು ಓದಿರಿ.
12) ಯಾವುದೋ ರಾಜಕೀಯ ಪಕ್ಷದ ಕೈಗೊಂಬೆ ಅಥವಾ ಸಂಘ ಪರಿವಾರದ ಗುಲಾಮರಂತೆ ನೀವು ವರ್ತಿಸುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ.
13) ಆರ್ ಆರ್ ದಿವಾಕರ ಅವರ ಉಲ್ಲೇಖವನ್ನು ಮಾಡುವ ನೀವು ವಚನ ಮತ್ತು ಉಪನಿಷತ್ ಇವುಗಳ ಭಿನ್ನತೆ ಬಗ್ಗೆ ಅವರೇ ಹೇಳಿದ್ದಾರೆ.
14) ವಚನಗಳು ದೇಸಿ ಪ್ರಜ್ಞೆಯ ಬಂಡಾಯ ಸಾಹಿತ್ಯ
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮ ಸಮಾಜ ನಿರ್ಮಾಣದ ಗುರಿ ಬಸವಾದಿ ಪ್ರಮಥರದ್ದು.
15) ನೀವು ಹಿಂದೂ ಹಾಗೂ ಸನಾತನ ಪದವನ್ನು ಲಿಂಗಾಯತರ ಮೇಲೆ ಹೇರಿಕೆ ಮಾಡ ಬೇಡಿ.
16) ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಬಗ್ಗೆ ಹಗುರವಾಗಿ
ಮಾತನಾಡ ಬೇಡಿರಿ. ಅದೇ ರೀತಿ ನಿಮ್ಮ ಹಿಂದೂ ಧರ್ಮದ ಆಚರಣೆ ನಂಬಿಕೆ ದೇವರನ್ನು ಟೀಕಿಸುವ ಯಾವುದೇ ಸ್ವಾಮೀಜಿಗಳ ಮಾತುಗಳನ್ನು ನಾವೂ ಟೀಕಿಸುತ್ತೇವೆ ಖಂಡಿಸುತ್ತೇವೆ.
ಇನ್ನು ಮುಂದಾದರು ತಾವು ತಮ್ಮ ಸ್ಥಾನ ಪೀಠವನ್ನು ಪರಿಗಣಿಸಿ ಅತ್ಯಂತ ಗೌರವಯುತವಾಗಿ ಮಾತನಾಡಿ ಎಂದು ಈ ಮೂಲಕ ತಮ್ಮಲ್ಲಿ ಅರಿಕೆ ಮಾಡಿಕೊಂಡು ಎಚ್ಚರಿಕೆ ನೀಡುತ್ತೇನೆ.
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ


