ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೊಲ್ಹಾರ ಪೊಲೀಸ ಠಾಣಾಧಿಕಾರಿ ಅಶೋಕ ನಾಯಕ ತಿಳಿಸಿದರು.
ವಿಜಯಪುರ ಜಿಲ್ಲಾ ಪೊಲೀಸ್ ಹಾಗೂ ಬಸವನಬಾಗವಾಡಿ ಉಪ ವಿಭಾಗದ ಕೊಲ್ಹಾರ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಅಂಗವಾಗಿ ವಿಜಯಪುರ ಹುಬ್ಬಳ್ಳಿ ರಾಷ್ಟೀಯ ಹೆದ್ದಾರಿ ಬಳಿ ಸೋಮವಾರ ಪಿಎಸ್ಐ ಅಶೋಕ ನಾಯಕ ಅವರು ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ಕೊಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕಡ್ಡಾಯವಾಗಿ ದ್ವಿಚಕ್ರ ವಾಹನದ ಸವಾರರು ಹೆಲ್ಮೆಟ್ ಧರಿಸತಕ್ಕದ್ದು, ಸೀಟ್ ಬೆಲ್ಟ್ ಹಾಕಿಕೊಳ್ಳುವುದು, ಲೈಸನ್ಸ್ ಅನ್ನು ಹೊಂದಿರುವುದು, ವಾಹನದ ಇನ್ಸೂರೆನ್ಸ್ ಕಡ್ಡಾಯ ಮಾಡಿಸಿಕೊಳ್ಳುತಕ್ಕದ್ದು, ವಾಹನದ ನೋಂದಣಿಯನ್ನು ಮಾಡಿಸಿಕೊಳ್ಳುವಂಥದ್ದು, ಕುಡಿದು ವಾಹನ ಚಾಲನೆಯನ್ನು ಮಾಡದೆ ಇರುವುದು ಈ ರೀತಿ ಮಾಹಿತಿಯನ್ನು ವಾಹನ ಸವಾರರಿಗೆ ನೀಡಿ ಅವರಲ್ಲಿ ಜಾಗೃತಿಯನ್ನು ಮೂಡಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು.

