ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಝಳಕಿ ಹಾಗೂ ಇಂಡಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ (ಕಲ್ಯಾಣ) ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಇಂಡಿ ತಾಲೂಕು ಕರವೇ ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರ ಅವರ ನೇತೃತ್ವದಲ್ಲಿ ರವಿವಾರ ಮನವಿ ಸಲ್ಲಿಸಲಾಯಿತು.
ಲೋಣಿ ಬಿಕೆ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ (ಕಲ್ಯಾಣ) ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಇಂಡಿ ತಾಲೂಕು ಕರವೇ ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರ, ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿಲ್ಲ ಹಾಗೂ ಕಲಿಕಾ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಇಂಡಿ ತಾಲೂಕಿನ ಬಹುತೇಕ ಅಂಗನವಾಡಿಗಳಲ್ಲಿಯೂ ಇದೇ ಪರಿಸ್ಥಿತಿ ಇರುವುದಾಗಿ ಆರೋಪಿಸಿದರು.
ಈ ಕುರಿತು ಸಿಡಿಪಿಓ ಅಧಿಕಾರಿಗಳಿಗೆ ಹಲವು ಬಾರಿ ಕ್ರಮಗೈಗೊಳ್ಳುವಂತೆ ಹೇಳಿದರು ಯಾವುದೇ ಪ್ರಯೋಜನ ವಾಗಿಲ್ಲಾ ಎಂದ ಅವರು ಯಾವುದೇ ಅಂಗನವಾಡಿ ಕೇಂದ್ರಗಳಿಗೆ ಸಿಡಿಪಿಓ ಅಧಿಕಾರಿಗಳು ಭೇಟಿ ನೀಡದೆ ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಮಗ್ರ ಸಮೀಕ್ಷೆ ನಡೆಸಿ ತಪ್ಪಿತಸ್ಥ ಅಂಗನವಾಡಿ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಮನವಿ ಮಾಡಿದರು.
ಈ ಸಂರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರ, ವಲಯ ಅಧ್ಯಕ್ಷ ರವಿಕುಮಾರ ಹೂಗಾರ, ಬಾಲಕೃಷ್ಣ ಭೋಸಲೆ, ಅಮಸಿದ್ದ ಠಾಣೆ, ಪಿಂಟು ಹಾಡಸಂಗೆ, ಉಮೇಶ ಕಾರ್ಕಲ, ಶಿವರಾಜ ಆಕಳವಾಡಿ, ಚಂದುಗೌಡ ಪಾಟೀಲ, ಮಹೇಶ ಅಗಸರ ಸೇರಿದಂತೆ ಇತರರು ಉಪಸ್ಥಿತರಿದ್ದರು.

