ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದರು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಭೀಮಾಶಂಕರ ವಾಘಮೋರೆ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-2 ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 19ನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿಯಾಗಿದ್ದ ಸಾವಿತ್ರಿಬಾಯಿ ಫುಲೆ ಅವರು ಶ್ರೇಷ್ಠ ಲೇಖಕಿ ಸಹ ಹೌದು, ಲಿಂಗಭೇದ ಮತ್ತು ಜಾತಿ ಸಮಸ್ಯೆಗಳ ವಿರುದ್ಧ ಹೋರಾಡಿ,ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುತ್ತಾ ಭಾರತೀಯ ಸ್ತ್ರೀವಾದದ ತಾಯಿಯಾಗಿ ಇಂದಿನ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಗರ್ಭಿಣಿ ಮತ್ತು ಶೋಷಿತ ವಿಧವೆಯರ ಸುರಕ್ಷತೆಗಾಗಿ ತಮ್ಮ ಸ್ವಂತ ಮನೆಯಲ್ಲಿ ಶಿಶು ಹತ್ಯೆ ತಡೆಗಟ್ಟುವ ಮನೆ ಪ್ರಾರಂಭಿಸಿ ಸತ್ಯಶೋಧಕ ಸಮಾಜ ಸ್ಥಾಪಿಸಿ, ವರದಕ್ಷಿಣೆ ಅಥವಾ ಬಹಿರಂಗ ವೆಚ್ಚವಿಲ್ಲದೆ ಮದುವೆಯ ಅಭ್ಯಾಸವನ್ನು ಪ್ರಾರಂಭಿಸಿದ ಭಾರತದ ದಿಟ್ಟ ಮಹಿಳೆ ಎಂದು ಹೇಳಿದರು. ಸಂದರ್ಭದಲ್ಲಿ ಶಾಲೆಯ ಎಲ್ಲ ಮಕ್ಕಳಿಗೆ ಜಯಂತಿ ಸವಿನೆನಪಿಗಾಗಿ ನೋಟ್ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು.
ಶಿಕ್ಷಕ ಬಸವರಾಜ ಕರಜಗಿ, ಮುಖ್ಯ ಅತಿಥಿ ಶ್ರೀಶೈಲ ಮಾಳಕೊಟಗಿ ಅವರು ಮಾತನಾಡಿದರು.
ಶಿಕ್ಷಕ ಎಚ್ ಜೆ ಲೋಣಿ ಹಾಗೂ ಮಕ್ಕಳಾದ ಸಾನ್ವಿ ಝಂಡೆ, ಅಭಿಜಿತ ಇರಸೂರ, ಅಂಕುಶ ಕ್ಷತ್ರಿ, ರಾಣಿ ವಾಘಮೋರೆ, ಶ್ರದ್ಧಾ ಬುರುಡ, ಶೃತಿ ಕ್ಷತ್ರಿ, ಚಂದ್ರಭಾಗಾ ಗಾಡಿವಡ್ಡರ, ಅಂಜಲಿ ಇಟಗಾರ, ಜಾಯಿದಾ ಸೌದಾಗರ, ಗಗನ ಶಂಖು, ಸಾಹಿತ್ಯಾ ಶಂಖು ಸೇರಿದಂತೆ ಜಯಂತಿ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಶಿಕ್ಷಕ ಮಹಾದೇವ ಐಹೊಳ್ಳಿ ಸ್ವಾಗತಿಸಿದರು.ಶಿಕ್ಷಕ ಡಿ ಎಸ್ ಬಗಲಿ ನಿರೂಪಿಸಿದರು. ಅತಿಥಿ ಶಿಕ್ಷಕಿ ಪ್ರೇಮಾ ಧೋತ್ರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಆದಿಗೊಂಡೆ, ವಿ ಎಸ್ ಪತ್ತಾರ, ಸುನಂದಾ ಕೋಟಿ, ಜಯಶ್ರೀ ಗೋಟ್ಯಾಳ, ಅಪೇಕ್ಷಾ ಕರಜಗಿ, ಅಡುಗೆ ಸಹೋದರಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

