ಸಿಂದಗಿಯಲ್ಲಿ ಮಾಜಿ ಸೈನಿಕ ಬ್ರಿಗೇಡ್ ರಮೇಶ ಜಗತಪ್ಪ ಕರೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಖರೀದಿಸಬೇಕು. ನಮ್ಮ ಹಣ ನಮ್ಮ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಸೈನಿಕರು ಬ್ರಿಗೇಡ್ ರಮೇಶ ಜಗತಪ್ಪ ಹೇಳಿದರು.
ಸಿಂದಗಿ ನಗರದ ಸಾಯಿ ಬಾಬಾ ಮಂದಿರದಲ್ಲಿ ಸಾಯಿಬಾಬಾ ಅವರ ೧೪ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಸಾಯಿಬಾಬಾರವರ ಜೀವನ ಚರಿತ್ರೆಯ ಮಹಾ-ಪುರಾಣ ಕಾರ್ಯಕ್ರಮದಲ್ಲಿ ಸ್ವದೇಶಿ ಬಳಸಿ ದೇಶ ಉಳಿಸಿ ವಿಷಯವನ್ನು ಉದ್ದೇಶಿಸಿ ಮಾತನಾಡಿದರು.
ವಿದೇಶಿ ಉತ್ಪನ್ನಗಳನ್ನು ಖರೀದಿಸಿದರೆ ನಮ್ಮ ಹಣ ಹೊರ ದೇಶಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಆದ್ದರಿಂದ ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ನಮ್ಮ ನೆಲ ಜಲ ಉಳಿಸಬೇಕು. ನಮ್ಮ ಸಂಸ್ಕೃತಿ ಉಳಿಸಬೇಕಂಬ ಸೈಕಲ್ ಜಾಥಾ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ. ಈಗ ೨೧೦೦ ಕಿಲೋ ಮೀಟರ್ ಜಾಥಾ ಮುಗಿಸಿದ್ದೇವೆ ಒಟ್ಟು ೩೬೦೦ ಕಿಲೋ ಮೀಟರ್ ಜಾಥಾ ಮಾಡಲಿದ್ದೇವೆ ಎಂದು ಹೇಳಿದರು.
ಈ ವೇಳೆ ಡಿಪ್ಟಿ ಕಮಾಂಡೆಂಟ್ ರಮೇಶ ನರಸಯ್ಯ, ಮಾಜಿ ಸೈನಿಕ ಕರ್ನಲ್ ಕಂದ ಸ್ವಾಮಿ ಮಾತನಾಡಿ, ದೇಶ ಎಂಬುದು ದೊಡ್ಡ ಪರಿಕಲ್ಪನೆ. ದೇಶದ ಅಳಿವು ಉಳಿವಿಗೆ ನಮ್ಮ ಕಟ್ಟುಪಾಡುಗಳು ಮುಖ್ಯವಾದದ್ದು. ಮಾನವೀಯ ಧರ್ಮ ಅರಿವು ಮೂಡಿಸುವ ಜಾಥಾ ಇದಾಗಿದೆ. ಎಲ್ಲರೂ ಭಾರತದ ಭೀಮ್‌ಆಪ್ ಬಳಸಬೇಕು. ವಿದೇಶಿಯ ಆಪ್‌ಗಳನ್ನು ಬಳಸಬೇಡಿ ಎಂದು ಕರೆ ನೀಡಿದರು.
ಸಿಂದಗಿ ನಗರಕ್ಕೆ ಸ್ವದೇಶಿ ಬಳಸಿ ದೇಶ ಬೆಳೆಸಿ ಎಂದು ಜಾಥಾ ಮಾಡುತ್ತಿರುವುದು ಸೈಕಲ್ ಜಾಥಾ ಬ್ರಿಗೇಡ ಸವಾರರಿಗೆ ಬಸವೇಶ್ವರ ವೃತ್ತದಲ್ಲಿ ಭವ್ಯವಾಗಿ ಸ್ವಾಗತಿಸಿಲಾಯಿತು. ಜಾಥಾದಲ್ಲಿ ಗೋಪಿನಾಥ ಪಿಳ್ಳಿ, ಚೀಪ್ ಇಂಜಿನಿಯರ್ ಸಾಗರ್, ಹೇಮಂತ್ ಜಾದವ್, ಶಾಂತ, ಸಹಸ್ರನಾಮ ಅಯ್ಯರ, ರವಿ ಮುನಿಸ್ವಾಮಿ, ಬಾಬು, ರಮೇಶ ದಿಕ್ಷೀತ, ಬಿಜೆಪಿ ಮುಖಂಡ ಶ್ರೀಶೈಲ ಬಿರಾದಾರ ಮಾಗಣಗೇರಿ, ರೈತ ಸಂಘ ರಾಜ್ಯ ಪ್ರದಾನ ಕಾರ್ಯದರ್ಶಿ ಪೀರೂ ಕೆರೂರ, ತನ್ವೀರ ಬೈರಾಮಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಅಶೋಕ ಅಲ್ಲಾಪೂರ, ಶಿವಾನಂದ ನಂದಿಕೋಲ, ಅರ್ಚಕ ಬಮ್ಮಲಿಂಗಯ್ಯ ಚಿಕ್ಕಯ್ಯನಮಠ, ಶ್ರೀಶೈಲ ಜಮಾದಾರ, ನವೀನ ಶೆಳ್ಳಗಿ, ಶಿವು ಸೇರಿದಂತೆ ಅನೇಕರು ಇದ್ದರು.

