ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಲಿಂಗದಳ್ಳಿ ಗ್ರಾಮದ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಶಶಿಧರ ಟೆಂಗಳೆ ೨ನೇ ಬಾರಿಗೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮೋತಿಲಾಲ ಜಾಧವ ಆಯ್ಕೆಯಾದರು.
ಜ.೪ ರಂದು ಚುನಾವಣೆ ನಿಗದಿಯಾಗಿದ್ದು ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿಯಾಗಿಲ್ಲ, ಶಶಿಧರ ಶ್ರೀಶೈಲ ಟೆಂಗಳೆಯವರು ಅಧಿಕೃತವಾಗಿ ಒಬ್ಬರೆ ಕಣದಲ್ಲಿರುವದರಿಂದ್ದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಒಟ್ಟು ೧೨ ಜನ ಸದಸ್ಯರಲ್ಲಿ ಅಧ್ಯಕ್ಷರಾಗಿ ಶಶೀಧರ,ಶ್ರೀಶೈಲ ಟೆಂಗಳೆ, ಮೂತಿಲಾಲ ಜಾಧವ ಉಪಾಧ್ಯಕ್ಷರಾಗಿ, ಸದಸ್ಯರಾಗಿ ಬೋದಿನಸಾಹೇಬ ಧಡೇದ, ಕಾಶೀನಾಥ ಜಾಧವ,ಈರಪ್ಪ ಗೊಟ್ಯಾಳ, ಪ್ರಭಯ್ಯಾ ಹಿರೇಮಠ, ಅಶ್ವೀನಿ ಟೆಂಗಳೆ, ನಾಗವ್ವ ಬೋಳಕೊಟಗಿ, ಬಸಪ್ಪಾ ಹೂಗಾರ, ಪ್ರಕಾಶ ಇಂಡಿ, ಬಾಬುರಾಯ ಡೊಂಬರ್, ಮಾಳಪ್ಪ ವಾಲೀಕಾರ ಸರ್ವಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಸದ್ದಲಗಿ ಪ್ರಕಟಣೆಗೆ ತಿಳಿಸಿದ್ದಾರೆ.
ಗ್ರಾಮದ ಮುಖಂಡರಾದ ಶ್ರೀಮಂತ ಹಿರೇಕುರಬರ, ಈಶ್ವರಗೌಡ ಪಾಟೀಲ, ವೇಣು ಚವ್ಹಾಣ, ಶೇಖರ ಶಿವಶರಣ, ಕಾಶಿನಾಥ ಟೆಂಗಳೆ, ಸೂರ್ಯಕಾಂತ ಹಿರೇಕುರಬರ್, ತಮ್ಮಣ್ಣಾ ಪೂಜಾರಿ, ಬುಡ್ಡೇಸಾಬ ಧಡೇದ , ಕಾರ್ಯದರ್ಶಿ ನಿಂಗಪ್ಪ ವಾಲೀಕಾರ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

