ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ‘ಆಸೆ’ ಎಂದರೆ ಬಯಕೆ, ಮೋಹ, ಹಂಬಲ, ಆಕಾಂಕ್ಷೆ, ಇಚ್ಛೆ, ಅಪೇಕ್ಷೆ , ಮನಸ್ಸಿನಲ್ಲಿ ಉಂಟಾಗುವ ತೀವ್ರವಾದ ಹಾತೊರೆಯುವಿಕೆ ಆಸೆ ಎಂದು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರದ ಮಲ್ಲಿಕಾರ್ಜುನ ಶಾಸ್ತ್ರೀ ಹೇಳಿದರು.
ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಒಬ್ಬ ವ್ಯಕ್ತಿ, ವಸ್ತುವಿಗಾಗಿ, ಐಹಿಕ ಸುಖಕ್ಕಾಗಿ ಅಥವಾ ಗುರಿಗಾಗಿ ಮನಸ್ಸಿನಲ್ಲಿ ಉಂಟಾಗುವ ಚಂಚಲ ಭಾವನೆಯನ್ನು ಸೂಚಿಸುತ್ತದೆ. ಅತಿಯಾದ ಆಸೆ ಗತಿಗೇಡು ಎಂದವರು. ಮನದ ಮುಂದಿನ ಆಸೆಯೇ ಮಾಯೆ, ಆಸೆಗೆ ಕೊನೆಯಿಲ್ಲ, ಸದ್ಗುಣಕ್ಕೆ ಸಾವಿಲ್ಲ, ಅಂತಹ ಸದ್ಗುಣ, ಸದ್ಬುದ್ಧಿ, ಸದಾಚಾರ, ಧಾರಾಳವಾಗಿ ಧಾರೆ ಎರೆಯುವ, ಷ ಬ್ರ ಚನ್ನಬಸವ ಶಿವಾಚಾರ್ಯರು ಮುನ್ನೆಡೆಸುವ ಮಾಸಿಕ ಹುಣ್ಣಿಮೆಯ ಸತ್ಸಂಗ ಸುತ್ಯಾರ್ಹವಾದುದ. ಸದ್ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಕಾಯಕ ದಾಸೋಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಡು, ಸದ್ಗುರುವಿನ ಸನ್ನಿಧಿಯಲ್ಲಿ ಸೇರಿದಾಗಲೇ ಜೀವನ ಸಾರ್ಥಕ ಎಂದು ಆಶಿಸಿದರು.
ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು, ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ ವಂದಿಸಿದರು. ಪ್ರಮುಖರಾದ ಸಾಹಿತಿ ನಿಂಗನಗೌಡ ದೇಸಾಯಿ, ಮುದಕಣ್ಣ ಸಾಹು ಹುಣಸಗಿ, ಪ್ರಶಾಂತ ಹಿರೇಮಠ, ಅಭಿಷೇಕ್ ಪಾಟೀಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.

