ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ವಾಗ್ದೇವಿ ಕಾಲೋನಿ ನಿವಾಸಿ, ರಂಗಭೂಮಿಯ ಹಿರಿಯ ಕಲಾವಿದ ಮಲ್ಲಪ್ಪ(ಮಲ್ಲೇಶಿ) ಮುತ್ತಪ್ಪ ಜಮಖಂಡಿ(೭೧) ಶನಿವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ, ಪುತ್ರಿ
ಸೇರಿದಂತೆ ಅಪಾರ ಬಂಧು ಬಳಗವಿದೆ.
ಮೂಲತಃ ಜಮಖಂಡಿ ತಾಲೂಕಿನ ಮರನೂರ ಗ್ರಾಮದ ಮಲ್ಲಪ್ಪ ಚಿಕ್ಕವಯಸ್ಸಿನಲ್ಲಿಯೇ ನಾಟಕ ಕಲೆ ರೂಢಿಸಿಕೊಂಡು ಹವ್ಯಾಸಿ ನಾಟಕ ಸಂಘಗಳಲ್ಲಿ ನಾನಾ
ಪಾತ್ರಗಳನ್ನು ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.
ಜಮಖಂಡಿ ತಾಲೂಕಿನ ಹುನ್ನೂರಿನ ಚನ್ನಬಸವೇಶ್ವರ ನಾಟ್ಯ ಕಲಾ ಸಂಘ ಸತತ ೨೫ ವರ್ಷ ನಾಟಕಗಳನ್ನು ಪ್ರದರ್ಶಿಸಿ ರಜತ ಮಹೋತ್ಸವ ಆಚರಿಸಿಕೊಳ್ಳುವಲ್ಲಿ ಮಲ್ಲೇಶಿ ಅವರ ಕೊಡುಗೆ ಅಪಾರವಿದೆ.
ಸಾಹಿತಿ ವಸಂತ ಅಗಸಿಮನಿ ಅವರ ಬಂಜೆ ತೊಟ್ಟಿಲು ನಾಟಕದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿ ಮಿಂಚಿದ್ದ ಮಲ್ಲಪ್ಪ ಅವರು, ಧನಪಿಶಾಚಿ, ಬದುಕು ಬಂಗಾರವಾಯ್ತು, ರೈತನ ಮಕ್ಕಳು, ಎಚ್ಚೆಂ ನಾಯಕ, ನನ್ನವರು ನನ್ನ ಹಡೆದವರು ಸೇರಿ ಹಲವಾರು ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿ ಅವುಗಳಿಗೆ ಜೀವ ತುಂಬಿದ್ದರು. ಕೆಲವು ನಾಟಕಗಳಿಗೆ
ನಿರ್ದೇಶನ ನೀಡಿ ಪ್ರದರ್ಶನ ಯಶಸ್ವಿಗೊಳ್ಳುವಂತೆ ಮಾಡಿ ಕಲಾಪ್ರೇಮಿಗಳ ಮನ
ಗೆದ್ದಿದ್ದರು.

