ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ಜ್ಞಾನಸಂತ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ಗುರು ಸ್ಮರಣೆಯಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಸಿದ್ದೇಶ್ವರರ ಭಾವಚಿತ್ರಕ್ಕೆ ಪುಷ್ಪಾಚರಣೆ ನೆರವೇರಿಸುವ ಮೂಲಕ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಅಯ್ಯಪ್ಪ ಸ್ವಾಮಿ ಸನ್ನಿದಿಯಿಂದ ಆರಂಭವಾದ ಸಿದ್ದೇಶ್ವರ ಭಾವಚಿತ್ರದ ಮೆರವಣಿಗೆಯುದ್ದಕ್ಕೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಜನೆ ಮಾಡುತ್ತಾ ಜನರಿಗೆ ಬಾಳೆಹಣ್ಣು,ಶಿರಾ ಪ್ರಸಾದ ವಿತರಿಸಿದ್ದು ವಿಶೇಷ.
ದೇವಸ್ಥಾನದ ಆರಂಭಗೊಂಡ ಮೆರವಣಿಗೆ ಪಲ್ಲೆಕಟ್ಟೆ, ಪತ್ತಾರ ಗಲ್ಲಿ, ಅಗಸಿ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲ ಹೊತ್ತು ಸಿದ್ದೇಶ್ವರ ಸ್ವಾಮೀಜಿ ಕುರಿತು ಮಾಲಾಧಾರಿಗಳು ಭಕ್ತಿ ಗೀತೆ ಹಾಡಿದರು. ನಂತರ ಅಗಸಿ ಮಾರ್ಗವಾಗಿ ಗ್ರಾಮದೇವತೆ ದೇವಸ್ಥಾನ ಮಾರ್ಗ, ಬಸವಜನ್ಮ ಸ್ಮಾರಕ ಮಾರ್ಗವಾಗಿ ವಿಜಯಪುರ ರಸ್ತೆ ಮೂಲಕ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು. ಮೆರವಣಿಗೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಾದ ಶಿವು ಗುರುಸ್ವಾಮಿ,ಮಲ್ಲು ಗುರುಸ್ವಾಮಿ, ಸಿದ್ದು ಗುರುಸ್ವಾಮಿ, ಭೀಮು ಗುರುಸ್ವಾಮಿ, ಮಾಂತು ಗುರುಸ್ವಾಮಿ, ನಾಗು ಗುರುಸ್ವಾಮಿ, ಸಂಜು ಗುರುಸ್ವಾಮಿ, ಅರವಿಂದ ಗುರುಸ್ವಾಮಿ ಬಸವನಬಾಗೇವಾಡಿಯ ಎಲ್ಲ ಅಯ್ಯಪ್ಪ ಮಾಲಾಧಾರಿಗಳು ಇದ್ದರು.

