ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹಿರೇಮಠ ಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಅಲ್ಲಿನ ನಿವಾಸಿಗಳು ಸಿದ್ದೇಶ್ವರ ಭಾವಚಿತ್ರದ ಮುಂದೆ ಮೊಂಬತ್ತಿ ಬೆಳಗಿ ಶ್ರದ್ಧಾ-ಭಕ್ತಿಯಿಂದ ಗುರು ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಜ್ಞಾನದ ಬಲದಿಂದ ರಾಷ್ಟ್ರ ಸಂತರಾಗಿದ್ದಾರೆ. ಇವರು ಸದುವಿನಯರಾಗಿದ್ದರು. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಇವರು ತಮ್ಮ ಆಧ್ಯಾತ್ಮಿಕ ಜ್ಞಾನದಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಇವರು ತಮ್ಮ ಪ್ರವಚನದ ಮೂಲಕ ಜೀವನದ ಮೌಲ್ಯ, ನಿಸರ್ಗದ ಪ್ರೇಮ ಸೇರಿದಂತೆ ಸನ್ಮಾರ್ಗಕ್ಕೆ ಬೇಕಾದ ಮೌಲ್ಯಗಳನ್ನು ಜನರ ಮನಮುಟ್ಟುವಂತೆ ಹೇಳುತ್ತಿದ್ದರು.ಇವರ ಪ್ರವಚನ ಕೇಳಲು ಸಹಸ್ರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಇಂತಹ ಸಂತರು ಜನಿಸಿದ ಸಂದರ್ಭದಲ್ಲಿ ನಾವು ಸಹ ಜನಿಸಿದ್ದು ನಮ್ಮ ಭಾಗ್ಯವಾಗಿದೆ. ಇವರು ಹೇಳಿದ ಆಧ್ಯಾತ್ಮಿಕ ಅಂಶಗಳನ್ನು, ಸನ್ಮಾರ್ಗದ ಅಂಶಗಳನ್ನು ಅರಿತು ಜೀವನ ಸಾಗಿಸಬೇಕು. ಅವರನ್ನು ನಾವು ಜ್ಞಾನದಲ್ಲಿ ಕಾಣುವಂತಾಗಬೇಕೆಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ದೇಸಾಯಿ, ಶೇಖಣ್ಣ ಗೊಳಸಂಗಿ, ಬಸವರಾಜ ಶೆಂಡೆ, ಸಂಗಮೇಶ ಪೂಜಾರಿ, ಅನಿಲ ದುಂಬಾಳಿ, ಶರಣಗೌಡ ಬಿರಾದಾರ, ಭೀಮಣ್ಣ ರೆಡ್ಡೆರ, ಶರಣಪ್ಪ ಚೌರಿ, ಶಿವು ಮಂಟಾನ್ನವರ, ಶ್ರೀಶೈಲ ಹಿರೇಮಠ, ಬಸವರಾಜ ಗಚ್ಚಿನವರ, ಎಸ್.ಕೆ.ಸೋಮನಕಟ್ಟಿ, ಸಿ.ಎಲ್.ಮುರಾಳ, ವಿರೇಶ ಹಿರೇಮಠ, ಮಾಳು ಪೂಜಾರಿ, ಪಿಂಟು ಕಿಣಗಿ, ಪಿಂಟು ಗೊಳಸಂಗಿ, ವಿಜಯ ಗೊಳಸಂಗಿ, ಬೀರಪ್ಪ ಪೂಜಾರಿ, ರೇಖಾ ಕಲ್ಲೂರ, ಭಾಗಮ್ಮ ಮೇಟಿ, ಪುಷ್ಪಾವತಿ ಬಿರಾದಾರ, ವಿಜಯಲಕ್ಷ್ಮೀ ಹಿರೇಮಠ ಇತರರು ಇದ್ದರು. ಹಿರೇಮಠ ಗಲ್ಲಿ ನಿವಾಸಿಗಳು ಪ್ರಸಾದ ವ್ಯವಸ್ಥೆ ಮಾಡಿದ್ದರು.

