ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯದ ಕನ್ನಡ ದೀಕ್ಷಾಬದ್ಧ ಸಂಘಟನೆಯಾದ ಕದಂಬ ಸೈನ್ಯ ಸಂಘಟನೆಯು ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜ.07ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾಯಿ ಭುವನೇಶ್ವರಿಯ ಪುಣ್ಯಕ್ಷೇತ್ರವಾದ ಭುವನಗಿರಿ ದೇವಸ್ಥಾನದ ಸಭಾಂಗಣದಲ್ಲಿ
ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಪ್ರತಿವರ್ಷ ಕೊಡ ಮಾಡುವ ಕದಂಬರತ್ನ 2025 -26 ನೇ ಸಾಲಿನ ಪ್ರಶಸ್ತಿಯನ್ನು ವಿಜಯಪುರದ ಮಹಾನಗರ ಪಾಲಿಕೆಯ ಮಹಾಪೌರ ಮಡಿವಾಳಪ್ಪ ಎಸ್ ಕರಡಿ, ಹಿರಿಯ ಪತ್ರಕರ್ತ
ಮೊಹಮ್ಮದ್ ಇರ್ಫಾನ್ ಶೇಖ್, ಗುತ್ತಿಗೆದಾರ ಚೆನ್ನಪ್ಪ ರುದ್ರಪ್ಪ ರೂಡಗಿ ಹಾಗೂ ಕು. ಸುಕನ್ಯ ಈರಯ್ಯ ಹಿರೇಮಠ ಇವರಿಗೆ ಕದಂಬರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಪ್ರಶಸ್ತಿ ಪುರಸ್ಕೃತ ಗಣ್ಯ ಮಾನ್ಯರಿಗೆ ಜ. 7 ರಂದು ಭುವನಗಿರಿ ಮಾತೆ ಭುವನೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ವಿನಾಯಕ ಸೊಂಡುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
