ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕ್ರೀಡಾ ಚಟುವಟಿಕೆಗಳು ಅಂದರೆ ಕೇವಲ ಕ್ರೀಡೆ ಅಲ್ಲ ಅದು ಆರೋಗ್ಯದ ಹಬ್ಬ, ಕ್ರೀಡೆ ದೇಹವನ್ನು ಸದೃಢವನ್ನಾಗಿ ಮಾಡುತ್ತದೆ ಎಂದು
ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ಕನ್ನಡ ಮಾಧ್ಯಮ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ನಡೆದ ಪ್ರಭು ಅವಾರ್ಡ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ತಲ್ಲಿನರಾಗದೆ , ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ದೈಹಿಕವಾಗಿ, ಶಾರೀರಿಕವಾಗಿ ಸದೃಢರಾಗಬೇಕು. ಸ್ಪರ್ಧೆಯಲ್ಲಿ ಗೆಲುವು ಸೋಲು ಎರಡೂ ಸಹಜ. ಆದರೆ ಭಾಗವಹಿಸುವ ಧೈರ್ಯವೇ ದೊಡ್ಡದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಅನುಭವ ಮತ್ತು ಶಿಸ್ತಿನ ಗುಣ ಬೆಳೆಸಿಕೊಳ್ಳಲು ಸಾಧ್ಯ, ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಓಲೆಮಠದ ಮಹಾಸ್ವಾಮಿ ಶ್ರೀ ಆನಂದ ದೇವರು ಮಾತನಾಡಿ, ನಾವು ಮಾತ್ರ ಮುಂದೆ ಸಾಗುವುದು ಸಾಕಾಗದು, ನಮ್ಮ ಜೊತೆಯಲ್ಲಿ ಇತರರನ್ನು ಸಹ ಕೈಹಿಡಿದು ಕೊಂಡೊಯ್ಯುವ ಮನೋಭಾವ ಅಗತ್ಯ. ಪ್ರತಿಯೊಬ್ಬರ ಜೀವನದಲ್ಲೂ ಗುರು ಅತ್ಯಂತ ಮುಖ್ಯ. ಕೈ-ಕಾಲುಗಳಿಲ್ಲದವರೂ ಸಾಧನೆ ಮಾಡುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಇವೆ ಹೀಗಿರುವಾಗ ನಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡರೆ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂದು ಹೇಳಿದರು.
ಸಿನಿಮಾದಲ್ಲಿ ನಾಯಕನಂತೆ ಕಾಣಬೇಕೆಂಬ ಆಸೆ ಅನಗತ್ಯ. ನಿಜ ಜೀವನದಲ್ಲಿಯೇ ಪರಿಶ್ರಮ ಮತ್ತು ನೈತಿಕ ಮೌಲ್ಯಗಳಿಂದ ನಾಯಕನಾಗಬೇಕು. ವಿದ್ಯಾರ್ಥಿಗಳ ಗಮನ ಸದಾ ಗುರಿ ಮತ್ತು ಸಾಧನೆ ಮೇಲೆಯೇ ಇರಲಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ನಿರ್ದೇಶಕ ಸುಧೀರ ಗುಡಗುಂಟಿ, ದೇವಲ ದೇಸಾಯಿ, ಉಮೇಶ ಹಿರೇಮಠ , ಪಾರ್ವತಿ ಗುಡಗುಂಟಿ , ಬಸಯ್ಯ ಮಹಾಲಿಂಗಪೂರಮಠ, ನೇಮಣ್ಣಾ ಜಮಖಂಡಿ, ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಮುಖ್ಯಗುರುಗಳಾದ ಕೆ.ವಾಯ್. ಭೂತಾಳಿ, ಶಾಲಾ ನಿರ್ದೇಶಕ ಡಾ. ಎಸ್.ಎಸ್. ಹೂಲಿ, ಆಡಳಿತಾಧಿಕಾರಿ ಪ್ರೊ. ವಾಯ್. ಬಿ. ಹೊಟ್ಟಿ, ಶಿಕ್ಷಕರಾದ ಕೆ.ಬಿ.ಮಠ , ಎಸ್ .ಎಂ.ಹಿಡಕಲ್, ಜಿ. ಪಿ.ಆಲಬಾಳ, ಎಸ್. ವಿ.ಮರನೂರ, ಎಸ್. ಹೆಚ್. ಮಾಳಿ, ಎಸ್
ಎಚ್ .ಸನದಿ , ಆರ್. ಎ .ಹಿರೇಮಠ ಹಾಗು ಶಿಕ್ಷಕಿಯರಾದ ಶ್ರೀಮತಿ ಎಂ. ಬಿ. ಗುಮಾಸ್ತೆ , ಶ್ರೀಮತಿ ಎನ್. ಬಿ. ಮನಗೂಳಿ , ಶ್ರೀಮತಿ ಎಸ್. ಎಸ್. ಹಿರೇಮಠ , ಶ್ರೀಮತಿ ಎಸ್. ಎಸ್. ಹಿರೇಮಠ್ ,
ಶ್ರೀಮತಿ ಎಲ್. ಎಮ್ .ಕಲ್ಮಠ , ಶ್ರೀಮತಿ ಜಿ. ಕೆ. ಕರಲಟ್ಟಿ, ಶ್ರೀಮತಿ ಯು. ಬಿ .ಕಂಠಿಮಠ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

