ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಜನವರಿ ೨೫ ರವಿವಾರ ರಥಸಪ್ತಮಿ ಶುಭ ಮಹೂರ್ತದಂದು ರಾಜ್ಯಮಟ್ಟದ ಆದಿ ಬಣಜಿಗ ಸಮಾಜದ ವಧು-ವರರ ಸಮಾವೇಶವನ್ನು ವಿಜಯಪೂರ ನಗರದ ಸಂಗನಬಸವ ಸಮುದಾಯ ಭವನ ಲಿಂದಗುಡಿ ರಸ್ತೆ ಬಿಎಲ್‌ಡಿಇ ಆಸ್ಪತ್ರೆ ಹತ್ತಿರ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಪಾಲ್ಗೊಳ್ಳಬೇಕೆಂದು ಜಿಲ್ಲಾ ಅಧ್ಯಕ್ಷ ಸೋಮನಿಂಗ ಕಠಾವಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾಯತ ಆದಿಬಣಜಿಗರ ಕ್ಷೇಮಾಭಿವೃದ್ದಿ ಸಂಘ ವಿಜಯಪೂರ(ರಿ), ಮತ್ತು ವಧು-ವರರ ಮಾಹಿತಿ ಕೇಂದ್ರ ಸಂಘಟಣೆ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳಾದ ಮಹರಾಷ್ಟ್ರ, ಆಂದ್ರ ಪ್ರದೇಶ, ತೆಲಂಗಾಣದಲ್ಲಿರುವ ಆಧಿಬಣಜಿಗ ಸಮುದಾಯದ ಬಂಧುಗಳಲ್ಲಿ ಸಂಪರ್ಕ ಕಲ್ಪಿಸುವ ಬಾಂಧವ್ಯ ಪ್ರೀತಿ. ಪ್ರೇಮ, ಬೆಳೆಸುವ ಒಬ್ಬರಿಗೊಬ್ಬರು ಪರಸ್ಪರ ಪರಿಚಯ ಮಾಡಿಕೊಳ್ಳಲು ಅನುಕೂಲವಾಗುವ ದೃಷ್ಟಿಕೋಣದಿಂದ ಇದೊಂದು ಸಮಾಜದ ಐತಿಹಾಸಿಕ ನಿರ್ಣಯವಾಗಿದೆ ಎಂದರು.
ಸಮಾಜದಲ್ಲಿ ಅನೇಕ ಪಾಲಕರು ವರನ ಮತ್ತು ಕನ್ಯೆಯ ಮದುವೆ ಮಾಡಲು ಪರದಾಡುತ್ತಿರುವವರಾಗಿ ಕನ್ಯೆ ಹುಡುಕಿ ಸುಸ್ತಾಗಿರುವ ಸೂಕ್ತ ವರನ ಹುಡುಕಾಟದಲ್ಲಿರುವ ವಧು-ವರರ ಪಾಲಕರಿಗೆ ಸುವರ್ಣ ಅವಕಾಶವನ್ನು ಸಂಘಟಣೆಯವರು ಒದಗಿಸಿಕೊಟ್ಟಿದ್ದು ಇದರಿಂದ ಮನಸ್ಸು ಮನಸ್ಸುಗಳು ಬೆಸೆಯುವ ಎರಡು ಕುಟುಂಬಗಳನ್ನು ಒಂದಾಗಿಸುವ ಕಾರ್ಯಕ್ರಮವೇ ವಧು ವರರ ಸಮಾವೇಷವಾಗಿದ್ದು ಆದ್ದರಿಂದ ರಾಜ್ಯದ ಆದಿ ಬಣಜಿಗ ಸಮಾಜದ ಸರ್ವರೂ ಇದರ ಲಾಭವನ್ನು ಪಡೆದು ಸಮಾವೇಷವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸಮುದಾಯದ ನಡಿಗೆ ಮನಷ್ಯತ್ವದ ಕಡೆಗೆ ಅದ್ದೂರಿ ಮದುವೆಗೆ ಕಡಿವಾಣ ಹಾಕಲು ರೈತರ ಮಕ್ಕಳ ಮದುವೆಗೆ ಪ್ರೋತ್ಸಾಹಿಸುವ ಈ ಅಧ್ದೂರಿ ಕನ್ಯೆ-ವರನ ಅನ್ವೇಷಣಾ ಮೇಳದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಚಾರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕು. ೯೪೪೮೩೩೫೫೮೭, ೯೪೪೮೧೪೫೭೪೨, ೯೪೪೮೧೧೦೩೬೨, ೯೪೪೮೬೪೪೭೩೦. ಜನವರಿ ೨೦ರ ಒಳಗಾಗಿ ವಧು-ವರರ ಬಯೋ ಡಾಟಾ ಅನ್ನು ಸಂಘದ ಕಾರ್ಯಾಲಯಕ್ಕೆ ಸರ್ವರೂ ತಲುಪಿಸುವಂತಾಗಬೇಕು.
ಈ ಸಂಧರ್ಭದಲ್ಲಿ ಸುರೇಶ ಗಚ್ಚಿನಕಟ್ಟಿ, ಪರಶುರಾಮ ಚಿಂಚಲಿ, ಬಸಲಿಂಗಪ್ಪ ಕಪಾಳಿ, ಸುರೇಶ ಪರಗೊಂಡೆ, ಡಿ.ಆರ್.ಮಮದಾಪೂರ, ಶ್ರೀಶೈಲಗೌಡ ಪಾಟೀಲ, ಗಂಗಾಧರ ಸಂಬಣ್ಣಿ, ಪ್ರೇಮಾನಂದ ಹತ್ತಿ, ಅನೇಕರು ಉಪಸ್ಥಿತರಿದ್ದರು.
