ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಂಘದ ಒಕ್ಕೂಟದ ನಿರ್ದೇಶಕರಾದ ನಿಂಗನಗೌಡ ಪಾಟೀಲ ಅವರು ತಮ್ಮ ತಂದೆ ರುದ್ರಗೌಡ ವೀರನಗೌಡ ಪಾಟೀಲ್ ಇವರ ಸ್ಮರಣಾರ್ಥ ನಾಗರದಿನ್ನಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಬ್ಯಾಗ ಹಾಗೂ ನೋಟ್ ಬುಕ್ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಪ್ರದೀಪ ಪಾಟೀಲ, ಶಾಲೆ ಗುರುಗಳು ಗುರುಮಾತೆಯರು ಹಾಗೂ ಗ್ರಾಮದ ಯುವಕರು ಕೂಡ ಪಾಲ್ಗೊಂಡಿದ್ದರು.

