Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026

ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಜೆಪಿ ಯಾವ ರಾಜ್ಯದಲ್ಲಾದರೂ ದಲಿತ ಸಿಎಂ ಮಾಡಿದ್ದಾರಾ?
(ರಾಜ್ಯ ) ಜಿಲ್ಲೆ

ಬಿಜೆಪಿ ಯಾವ ರಾಜ್ಯದಲ್ಲಾದರೂ ದಲಿತ ಸಿಎಂ ಮಾಡಿದ್ದಾರಾ?

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಹಿರಿಯರು, ತಮ್ಮ ಬಿಜೆಪಿ ಪಕ್ಷದಿಂದ ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲಿ, ಅವರು ಮುಖ್ಯಮಂತ್ರಿಯಾದರೆ ನಮಗೂ ಸಂತೋಷವೇ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲಿ ಎಂದು ಕಾಂಗ್ರೆಸ್‌ಗೆ ಬೊಟ್ಟು ಮಾಡುವ ಮೊದಲು ಬಿಜೆಪಿಯವರಿಗೆ ಪ್ರಶ್ನೆ ಮಾಡಲಿ, ೨೭ ಕ್ಕೂ ಅಧಿಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅಲ್ಲಿ ಯಾವ ರಾಜ್ಯದಲ್ಲಾದರೂ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಜಿಗಜಿಣಗಿ ಹಿರಿಯ ನಾಯಕರು, ಕೇಂದ್ರದಲ್ಲಿ ಸಚಿವರಾದರು, ಆದರೆ ಅವರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ? ಈ ಹಿಂದೆ ಮೂರು ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದ ಬಿಜೆಪಿಯವರಿಗೆ ಆಗ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡುವ ಆಲೋಚನೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಬಿಎಸ್‌ವೈ ಕಣ್ಣೀರು ಹಾಕುವಾಗ ನೆನಪಾಗಿಲ್ಲವೇ?
ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ ಟೀಕೆ ಮಾಡಲಿ, ಆದರೆ ಟೀಕೆ ಸಾಂವಿಧಾನಿಕ ಪರಿಧಿಯೊಳಗೆ ಇರಬೇಕು, ಅದನ್ನು ಬಿಟ್ಟು ಸರ್ಕಾರ ಸತ್ತಿದೆ, ಹೆಣ ಹೊರಬೇಕು ಎಂದು ಅಸಂಬದ್ಧವಾಗಿ ಮಾತನಾಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕರು ಸಂವಿಧಾನಕ್ಕೆ ಹುದ್ದೆಯಲ್ಲಿರುವವರು ಸರ್ಕಾರದ ಬಗ್ಗೆ ಅಂತ್ಯದ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ, ಭಾರತೀಯ ಸಂಸ್ಕೃತಿಗೆ ಸರಿ ಹೊಂದದ ಭಾಷೆ ಬಳಸಿದ್ದಾರೆ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿಯೇ ಕಣ್ಣೀರು ಹಾಕುತ್ತಿದ್ದರು, ಆಗ ಈ ನಾಯಕರು ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ, ಅವರ ಕಣ್ಣೀರು ಒರೆಸಲು ವೀರಶೈವ ಲಿಂಗಾಯತ ಮಠಾಧೀಶರು ಬರಬೇಕಾಯಿತು, ಆಗ ಏಕೆ ಯಡಿಯೂರಪ್ಪ ಅವರ ಮೇಲೆ ಕನಿಕರ ಬರಲಿಲ್ಲ, ಆಗ ಸರ್ಕಾರ ಜೀವಂತವಿತ್ತೇ? ಎಂದು ಪ್ರಶ್ನಿಸಿದರು.
ಶಾಸಕರ ಖರೀದಿ ನಮ್ಮ ಸಂಸ್ಕೃತಿಯಲ್ಲ, ಈ ಹಿಂದೆ ನಗರ ಶಾಸಕ ಯತ್ನಾಳರೇ ಮುಖ್ಯಮಂತ್ರಿಯಾಗಲು ಕೋಟಿ ಕೋಟಿ ಕೊಡಬೇಕು ಎಂದು ಹೇಳಿದಾಗ ಕುದುರೆ ವ್ಯಾಪಾರ ನಿಮಗೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವೈದ್ಯಕೀಯ ಘಟಕದ ಡಾ.ರವಿ ಬಿರಾದಾರ, ಮುಖಂಡರಾದ ನಾಗರಾಜ ಲಂಬು, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ನಾಮಕೆವಾಸ್ತೆ ಅಧ್ಯಕ್ಷರೇ?

ಎಐಸಿಸಿ ಅಧ್ಯಕ್ಷ ಖರ್ಗೆ ಅವರು ನಾಮಕೆವಾಸ್ತೆ ಅಧ್ಯಕ್ಷರು ಎಂದು ಮಾಜಿ ಡಿಸಿಎಂ ಕಾರಜೋಳರು ವಾಗ್ದಾಳಿ ನಡೆಸಿದ್ದಾರೆ, ಹಾಗಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ನಾಮಕೆವಾಸ್ತೆ ಅಧ್ಯಕ್ಷರೇ? ಪ್ರಧಾನಮಂತ್ರಿಗಳು ಸಹ ಹೆಸರಿಗಷ್ಟೇ ಎಲ್ಲ ಅಧಿಕಾರವೂ ಭಾಗವತ ಅವರ ಬಳಿ ಕೇಂದ್ರಿಕೃತವಾಗಿವೆ,
ದಲಿತ ಬಾಂಧವರನ್ನು ಉದ್ದಾರಕ್ಕಾಗಿ ಕಾಂಗ್ರೆಸ್ ಕೈಗೊಂಡ ಕಾರ್ಯಕ್ರಮದಿಂದ ನೀವು ಈ ಅಧಿಕಾರಕ್ಕೆ ಬಂದಿದ್ದೀರಿ, ಟೀಕೆಗೋಸ್ಕರ ಹೇಳಿಕೆ ನೀಡಬೇಡಿ ಎಂದು ಎಸ್.ಎಂ. ಪಾಟೀಲ ಹೇಳಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026

ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೇಕಾರ ಸಮ್ಮಾನ್ ಯೋಜನೆಯಡಿ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026
    In ದಿನಪತ್ರಿಕೆ
  • ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
    In (ರಾಜ್ಯ ) ಜಿಲ್ಲೆ
  • ನೇಕಾರ ಸಮ್ಮಾನ್ ಯೋಜನೆಯಡಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬಿತ್ತನೆ ಬೀಜ ಮಾರಾಟ ಮಳಿಗೆ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ವಿಶೇಷ ಚೇತನರ ಅನುದಾನ ಅಧಿಕಾರಿಗಳು ಸಮರ್ಪಕವಾಗಿ ಬಳಸಿ
    In (ರಾಜ್ಯ ) ಜಿಲ್ಲೆ
  • ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಾಡಳಿತದ ಸಂಪೂರ್ಣ ಸಹಕಾರ
    In (ರಾಜ್ಯ ) ಜಿಲ್ಲೆ
  • ಡಿಜಿ ಪ್ರಶಂಸಾ ಪದಕಕ್ಕೆ ಚೆನ್ನಬಸವಣ್ಣ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶಿಕ್ಷಣ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯ :ಅಂಗಡಿ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆ ತುಂಬಲು ಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.