Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026

ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಂಜಪ್ಪ ಹಡೇ೯ಕರ ಕಾಯಕ ಬದುಕು ಪರಿಶುದ್ಧ :ಪ್ರೊ.ಪಟ್ಟಣಶೆಟ್ಟರ
(ರಾಜ್ಯ ) ಜಿಲ್ಲೆ

ಮಂಜಪ್ಪ ಹಡೇ೯ಕರ ಕಾಯಕ ಬದುಕು ಪರಿಶುದ್ಧ :ಪ್ರೊ.ಪಟ್ಟಣಶೆಟ್ಟರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ಕನಾ೯ಟಕ ಗಾಂಧಿ ಖ್ಯಾತಿಯ ಮಂಜಪ್ಪ ಹಡೇ೯ಕರ ಅವರ ಜೀವನ ಚರಿತ್ರೆಯ ಯಶೋಗಾಥೆ ಬದುಕನ್ನು ಜೀವಂತ ಪಳಿಕೆಯಲ್ಲಿರಿಸಲು ಗದುಗಿನ ಲಿಂ,ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಶ್ರಮಿಸಿದ್ದಾರೆ ಎಂದು ಗದಗ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊಫೆಸರ್ ಶಿವಾನಂದ ಪಟ್ಟಣಶೆಟ್ಟರ ಹೇಳಿದರು.
ಇಲ್ಲಿನ ಮಂಜಪ್ಪ ಹಡೇ೯ಕರ ಸ್ಮಾರಕ ಭವನದಲ್ಲಿ ಎಸ್.ವ್ಹಿ.ವ್ಹಿ ಸಂಸ್ಥೆ ಶಾಲಾ,ಕಾಲೇಜುಗಳಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಂಜಪ್ಪನವರು ಕರ್ನಾಟಕದ ಗಾಂಧಿವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸರಳ ಮಾದರಿ ಜೀವನಕ್ಕೆ ತೋಂಟದ ಸಿದ್ದಲಿಂಗ ಪೂಜ್ಯರು ಬೆರಗಾಗಿದ್ದರು. ಅವರ ಬಹುಮುಖ ಪ್ರತಿಭೆ ಚರಿತೆಗೆ ಮೆಚ್ಚಿದ್ದರು.ವಿಶೇಷ ಕಾಳಜಿ ಹೊಂದಿದ್ದರು. ಅಪ್ರತಿಮ ಸಮಾಜ ಸೇವಕ ಮಂಜಪ್ಪ ಅಪ್ಪಟ ದೇಶಪ್ರೇಮಿಯಾಗಿ, ಬಸವ ಚಿಂತನೆಗಳ ಸಾಕಾರಮೂತಿ೯ಯಾಗಿ ಗೈದ ಕಾಯಕಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ಎಂದರು.
ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿರುವ ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯ ಸ್ಥಾಪಿಸಿ ಜೀವನ ಶಿಕ್ಷಣಕ್ಕೆ ಹೊಸಭಾಷ್ಪ ಬರೆದು ಪ್ರಜ್ಞೆ ಮೆರೆದಿದ್ದಾರೆ.ನಾಡು,ನುಡಿ ಕಾಳಜಿಯಿಂದ ಅವಿರತ ಸಮಾಜಮುಖಿ ಪರ ಕಾಯಕಗೈದು ಶ್ರಮಿಸಿದ್ದಾರೆ. ಇಂಥ ಪುಣ್ಯ ಶರಣರು ಲಿಂಗೈಕ್ಯರಾದರೂ ಅವರು ಜೀವಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಪ್ರಾಮುಖ್ಯತೆ ನೀಡಿ ಮಾಡಿರುವ ಸತ್ಕಾರ್ಯಗಳು ಇನ್ನೂ ಜೀವಂತಿಕೆಯಾಗಿವೆ. ಮಂಜಪ್ಪನವರ ಸಮಾಧಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿ ನಶಿಸುತ್ತಿರುವಾಗ ತೋಂಟದ ಸಿದ್ದಲಿಂಗ ಪೂಜ್ಯರು ತೋರಿದ ಕಾಳಜಿಯಿಂದ ಜನಮನದಲ್ಲಿ ಮಂಜಪ್ಪ ಶರಣರು ಇಂದು ಉಳಿದಿದ್ದಾರೆ. ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿದ್ದ ಮಂಜಪ್ಪನವರ ಸಮಾಧಿ ಸ್ಥಳಾಂತರ ಕಾರ್ಯ ಅಂದು ತೋಂಟದ ಸಿದ್ದಲಿಂಗ ಪೂಜ್ಯರ ನೇತೃತ್ವದಲ್ಲಿ ಐತಿಹಾಸಿಕ ರೂಪದಲ್ಲಿ ನಡೆಯಿತು.ಆ ಸನ್ನಿವೇಶ ಅವಿಸ್ಮರಣೀಯವಾಗಿದೆ. ಕೃಷ್ಣೆ ಒಡಲಿನಿಂದ ಮಂಜಪ್ಪನವರ ಸಮಾಧಿ ಹೊರತೆಗೆದು ಪುನರ್ ಈ ಸ್ಥಳದಲ್ಲಿ ಸ್ಥಾಪಿಸಿ ಭವ್ಯ ಸ್ಮಾರಕ ಭವನ ನಿಮಿ೯ಸಲಾಗಿದೆ. ಸ್ಮಾರಕದಲ್ಲಿ ಮಂಜಪ್ಪನವರ ಕಂಚಿನ ಪುತ್ಥಳಿ ದರ್ಶನ ಭಕ್ತರು, ಅಭಿಮಾನಿಗಳು ಪಡೆಯುವ ಸೌಭಾಗ್ಯ ಇದೆ. ಇದಕ್ಕೆಲ್ಲ ತೋಂಟದ ಸಿದ್ದಲಿಂಗ ಶ್ರೀಗಳೇ ಕಾರಣರು.ಪೂಜ್ಯರ ಪ್ರೇರಕ ಶಕ್ತಿಯಿಂದ ಮಂಜಪ್ಪನವರು ಆಜರಾಮರಾಗಿದ್ದಾರೆ ಎಂದರು.
ಕುಷ್ಟಗಿ ಮಾಜಿ ಶಾಸಕ ಕೆ.ಶರಣಪ್ಪ, ಜಗದ್ಗುರು ತೋಂಟದಾರ್ಯ ಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ, ತೋಂಟದಾರ್ಯ ಇಂಜನಿಯರಿAಗ್ ಕಾಲೇಜಿನ ಪ್ರೊಫೆಸರ್ ಶ್ರೀಕಾಂತ ಶೆಟ್ಟರ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಭುಸ್ವಾಮಿ ಹೇಮಗಿರಿಮಠ, ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಚ್.ಎನ್.ಕೆಲೂರ, ಪಿ.ವಾಯ್.ಧನಶೆಟ್ಟಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ, ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಶಾಂತೂ ತಡಸಿ, ಸಚೀನ ಹೆಬ್ಬಾಳ, ಸಿದ್ದು ಪಟ್ಟಣಶೆಟ್ಟಿ, ಜಿ.ಆರ್.ಜಾಧವ ಇತರರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026

ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೇಕಾರ ಸಮ್ಮಾನ್ ಯೋಜನೆಯಡಿ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 25, 2026
    In ದಿನಪತ್ರಿಕೆ
  • ಕೊಲ್ಹಾರ ಇಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
    In (ರಾಜ್ಯ ) ಜಿಲ್ಲೆ
  • ನೇಕಾರ ಸಮ್ಮಾನ್ ಯೋಜನೆಯಡಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬಿತ್ತನೆ ಬೀಜ ಮಾರಾಟ ಮಳಿಗೆ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ವಿಶೇಷ ಚೇತನರ ಅನುದಾನ ಅಧಿಕಾರಿಗಳು ಸಮರ್ಪಕವಾಗಿ ಬಳಸಿ
    In (ರಾಜ್ಯ ) ಜಿಲ್ಲೆ
  • ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಾಡಳಿತದ ಸಂಪೂರ್ಣ ಸಹಕಾರ
    In (ರಾಜ್ಯ ) ಜಿಲ್ಲೆ
  • ಡಿಜಿ ಪ್ರಶಂಸಾ ಪದಕಕ್ಕೆ ಚೆನ್ನಬಸವಣ್ಣ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶಿಕ್ಷಣ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯ :ಅಂಗಡಿ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆ ತುಂಬಲು ಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.