ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ | ನಾದ ಗ್ರಾಮ ಸಂಪೂರ್ಣ ಬಂದ್
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಕಬ್ಬು ಬೆಳೆಗಾರರು ಕಬ್ಬಿಗೆ ದರ ನಿಗದಿ ಪಡಿಸಿ ಕಾರ್ಖಾನೆ ಪ್ರಾರಂಭಿಸಿರುವ ಹೋರಾಟ ಮುಂದುವರೆದಿದೆ.
ಶುಕ್ರವಾರ ಇಂಡಿ ಸಿಂದಗಿ ರಸ್ತೆಯ ಮಧ್ಯದಲ್ಲಿರುವ ನಾದ ಕೆಡಿ ಗ್ರಾಮ ಬಂದ್ ಮಾಡಿ ಮತ್ತು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.
ಇಂದರಿಂದ ಯಾವದೇ ವಾಹನಗಳು ಚಲಿಸಲಿಲ್ಲ.
ಇಂಡಿಯಿಂದ ಸಿಂದಗಿ, ಆಲಮೇಲ, ಗುಲಬರ್ಗಾ ಹೈದ್ರಾಬಾದಗಳಿಗೆ ಯಾವದೇ ವಾಹನಗಳು ಹೋಗದೆ ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು.
ನಾದ ಗ್ರಾಮದವರು ಕೂಡ ಸಹಕರಿಸಿ ಯಾವದೇ ಅಂಗಡಿ , ಚಹಾ ಅಂಗಡಿ ಹೋಟೆಲಗಳು ತೆರೆಯಲಿಲ್ಲ.
ಹೋರಾಟ ಸಮಿತಿಯ ಬಾಳು ಮುಳಜಿ ಮಾತನಾಡಿ, ಕಾರ್ಖಾನೆಯವರಿಗೆ ಜಿಲ್ಲಾಧಿಕಾರಿಗಳು ದರ ನಿಗದಿ ಪಡಿಸಲು ತಿಳಿಸಬೇಕು. ರೈತರು ಸಹನೆ ಕಳೆದುಕೊಂಡರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ದರ ನಿಗದಿ ಪಡಿಸಲು ಕಾರ್ಖಾನೆಯವರಿಗೆ ನಿರ್ದೇಶನ ನೀಡಬೇಕು ಎಂದರು.
ನಾದ ಗ್ರಾಮದ ಎಸ್.ಟಿ.ಪಾಟೀಲ, ಸಿದ್ದು ತಳವಾರ, ಎಂ.ಎಸ್.ಮುಲ್ಲಾ, ಕಲ್ಯಾಣಿ ಹಿಟ್ನಳ್ಳಿ, ಶ್ರೀಮಂತ ಖಸ್ಕಿ, ಶ್ರೀಶೈಲ ಮದರಿ, ಯಲ್ಲು ಹಳ್ಳಿ, ಸಂಗಣ್ಣ ದೇವರಮನಿ, ಸುರೇಶ ಪಾಟೀಲ, ವಿಠ್ಠಲ ಬಿರಾದಾರ, ಅಜೀಜ ದೇಸಾಯಿ, ಶಂಕರಗೌಡ ಬಂಡಿ, ಅಂಬುರಾಯ ಕವಟಗಿ, ಹಣಮಂತ ಬಿಸನಾಳ, ಸಂಗಮೇಶ ಪಾಸೋಡಿ, ರಾಜು ದೇವರಮನಿ, ರವಿ ರೋಡಗಿ, ಶೇಖರ ಮಂದೋಲಿ, ಮಲ್ಲನಗೌಡ ಬಿರಾದಾರ, ಪ್ರದೀಪ ಬೊರುಟಗಿ, ಕಾಂತು ನಾದ ಮತ್ತಿತತರಿದ್ದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ ಹೋರಾಟ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

