ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
‘ದೀಪಾವಳಿ’ ಎಂದು ಕರೆಯುವ ಬದಲು ‘ಡಮ್ಮಾವಳಿ’ ಎಂದು ಕರೆಯಬೇಕೇನೋ.
“ಪಟಾಕಿ ಹೊಡಿಬೇಡಿ.. ಹೊಡಿಬೇಡಿ, ಚೂರುಪಾರು ಉಳಿದುಕೊಂಡಿರುವ ಒಳ್ಳೆಯ ವಾತಾವರಣವನ್ನ ಹಾಳುಮಾಡಬೇಡಿ” ಎಂದು ಯಾರಿಗೆ ಎಷ್ಟು ಹೇಳಿದರೂ, ಕೇಳುವರಾರು? ಎಲ್ಲೋ ಹತ್ತಕ್ಕೊಬ್ಬರು ಅಷ್ಟೆ.
ರಾತ್ರಿಪೂರಾ ಸರಪಟಾಕಿ ಪಟ ಪಟ ಎಂದು, ಅಟಂ ಬಾಂಬ್ ಡಮ್ ಡಮ್ ಹೊಡೆಯುತ್ತಲೇ ಇರುತ್ತವೆ.
ಇದನ್ನು ನಿಲ್ಲಿಸಲಾಗುವುದಿಲ್ಲವೇ? ಆಗುತ್ತದೆ. ಆದರೆ ನಿಲ್ಲಿಸುವುದಿಲ್ಲ.
ಸಿಗರೇಟ್ ಮೇಲೆ “ಆರೋಗ್ಯಕ್ಕೆ ಹಾನಿಕಾರಕ” ಎಂದು ಬರೆಸಿ, ಸಿಗರೇಟ್ ತಯಾರಿಕೆಗೆ ಪರವಾನಗಿ ಕೊಟ್ಟಿರುವವರು, ಇದನ್ನು ನಿಲ್ಲಿಸುವರೇ?

ಪ್ಲಾಸ್ಟಿಕ್ ಕವರ್ ಬಳಸಿದರೆ ಫೈನ್ ಅಂತೆ, ಅದಕ್ಕೆ ತರಕಾರಿ ಮಾರ್ಕೆಟ್ ನಲ್ಲಿ, ಕವರ್ ಹೊರಗೆ ಕಾಣಿಸದಂತೆ ಬಚ್ಚಿಟ್ಟುಕೊಂಡು ಕೊಡುತ್ತಾರೆ.
ಕವರ್ ಫ್ಯಾಕ್ಟರಿ ಬಂದ್ ಮಾಡಿಸಿದರೆ, ಫೈನ್ ಹಾಕುವ ಕೆಲಸವೂ ತಪ್ಪುತ್ತದೆ & ಪರಿಶೀಲಿಸಲು ಹೋಗುವ ಸಿಬ್ಬಂದಿಯ ಸಂಬಳವೂ ಉಳಿಯುತ್ತದೆ ಅಲ್ಲವೇ?
ಸಿಗರೇಟ್ ಉತ್ಪಾದನೆ ನಿಲ್ಲಿಸಿ, ಅವಾಗ ಧೂಮಪಾನ ಆಗೋಲ್ಲ, ಸಿನಿಮಾಕ್ಕೆ ಮುಂಚೆ ಆ ಕೆಟ್ಟ ಕ್ಯಾನ್ಸರ್ ಮುಖ ನೋಡುವ ಕಷ್ಟವೇ ಇರೋಲ್ಲ.
ಪ್ಲಾಸ್ಟಿಕ್ ಕವರ್ ಫ್ಯಾಕ್ಟರಿ ಬಂದ್ ಮಾಡಿಸಿ, ಕದ್ದುಮುಚ್ಚಿ ಕೊಡೋ ಕಷ್ಟ ಇರೋಲ್ಲ.
ಪಟಾಕಿ ಫ್ಯಾಕ್ಟರಿ ಬಂದ್ ಮಾಡಿಸಿ, ಶಬ್ದ ಮಾಲಿನ್ಯ & ವಾಯುಮಾಲಿನ್ಯ ಅನುಭವಿಸುವ ಪರಿಸ್ಥಿತಿ ಇರೋಲ್ಲ.
ಅದುಬಿಟ್ಟು ಮಾಡಬೇಡಿ ಮಾಡಬೇಡಿ ಅನ್ನೋದು, ಉತ್ಪಾದನೆಗೆ ಪ್ರೋತ್ಸಾಹ ಕೊಡೋದು, ಜನ ಇಷ್ಟನ್ನೂ ಸಹ ಅರ್ಥ ಮಾಡಿಕೊಳ್ಳಲಾರದ ದಡ್ಡರು ಎಂಬ ಭ್ರಮೆ ಏಕೆ? ಗೊತ್ತಾಕ್ತಿಲ್ಲ.


