ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಲೆಕ್ಕಶಾಸ್ತ್ರ ದಿನದ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಣಕಾಸಿನ ಎಲ್ಲ ವ್ಯವಹಾರಗಳನ್ನು ದಾಖಲೆ ರೂಪದಲ್ಲಿ ಇಡಬಲ್ಲ ಏಕೈಕ ಶಾಸ್ತ್ರವೇ ಲೆಕ್ಕಶಾಸ್ತ್ರ. ಜನರು ಮೊದಲು ತಮ್ಮ ಎಲ್ಲ ಆದಾಯ ಮತ್ತು ಖರ್ಚು-ವೆಚ್ಚದ ಬಾಬತ್ತುಗಳನ್ನು ತಿಳಿದಂತೆ ಬರೆಯುತ್ತಿದ್ದರು. ಕಂಪನಿ. ವ್ಯವಹಾರ, ಕೈಗಾರಿಕೆ, ಉದ್ದಿಮೆ ಇನ್ನಿತರ ಆರ್ಥಿಕ, ವಾಣಿಜ್ಯ ಮತ್ತು ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವ ಸಂಸ್ಥೆಗಳ ಲೆಕ್ಕಪತ್ರಗಳನ್ನು ಬರೆದಿಡುವ ಪದ್ಧತಿಯನ್ನು ಮೊಟ್ಟಮೊದಲಿಗೆ ಪರಿಚಯಿಸಿದವರು ಲುಕಾ ಫೆಸಿಲಿಯೋ. ಇಂದಿನ ಕಾರ್ಪೊರೇಟ್ ಜಗತ್ತು ಇಷ್ಟೊಂದು ಹಣಕಾಸಿನ ವ್ಯವಹಾರಗಳನ್ನು ಶಿಸ್ತುಬದ್ಧ, ತಾತ್ವಿಕ ಮತ್ತು ಸರಳ ಪದ್ಧತಿಯಲ್ಲಿ ಲೆಕ್ಕದ ಪುಸ್ತಕ ಮತ್ತು ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ ಲೆಕ್ಕಶಾಸ್ತ್ರ ಪಿತಾಮಹ ಎಂದೇ ಹೆಸರುವಾಸಿಯಾದ ಲುಕಾ ಫೆಸಿಲಿಯೋ ಅವರ ಕೊಡುಗೆ ಅನನ್ಯವಾದುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಲೆಕ್ಕಶಾಸ್ತ್ರ ದಿನದ ಆಚರಣೆ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಈ ಲೆಕ್ಕಶಾಸ್ತ್ರ ಪದ್ಧತಿಯು ವ್ಯವಹಾರಿ ಸಂಸ್ಥೆಗಳ ಆರ್ಥಿಕ ದಾಖಲೆಯ ನಿರ್ವಹಣೆ, ಲಾಭ-ನಷ್ಟ ನಿರ್ಣಯ, ಆರ್ಥಿಕ ಸ್ಥಿತಿ ಅವಲೋಕನ ಮತ್ತು ಸುಧಾರಿಸುವುದು, ಪ್ರಮುಖ ಹಣಕಾಸಿನ ತೀರ್ಮಾನ ತೆಗೆದುಕೊಳ್ಳುವುದು, ಕಾನೂನು ಮತ್ತು ತೆರಿಗೆ ಅನುಸರಣೆ ಮತ್ತು ಹೂಡಿಕೆದಾರರಿಗೆ ಅವಶ್ಯಕ ಮಾಹಿತಿ ನೀಡುವಲ್ಲಿ ಸಹಕಾರಿಯಾಗಬಲ್ಲದು. ಸ್ಪರ್ಧಾತ್ಮಕ ಜಗತ್ತು ಇಂದು ವಾಣಿಜ್ಯ ಪದವಿ ಹೆಚ್ಚಿನ ಉದ್ಯೋಗಾಕಾಶಗಳ ಬಾಗಿಲು ತೆರೆದಿರುವುದು ಈ ವಿಷಯದ ಮಹತ್ವಕ್ಕಾಗಿ ಎಂದಯ ಹೇಳಬಹುದು ಎಂದರು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳ ಲೆಕ್ಕಶಾಸ್ತç ವಿಷಯ ಜ್ಞಾನ, ಪರಿಪೂರ್ಣ ಅರ್ಥಗ್ರಹಿಕೆಯೊಂದಿಗೆ ಪ್ರಾಯೋಗಿಕತೆಯನ್ನು ಹೊಂದಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವಂತರಾಗಲು ಸಾಧ್ಯವೆಂದು ಕಿವಿಮಾತು ಹೇಳಿದರು.
ಡಾ. ಐ.ಎಸ್,ಶಿವಶರಣರ, ಪ್ರೊ. ಆರ್.ಐ.ಜೋಗೂರ, ಪ್ರೊ. ವಲ್ಲಭ ಕಬಾಡೆ ಇನ್ನಿತರರು ಉಪಸ್ಥಿತರಿದ್ದರು. ಪ್ರಕಾಶ ಸಣ್ಣಕ್ಕಿ ಸ್ವಾಗತಿಸಿದರು. ಕಿರಣ ರಾಠೋಡ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತç ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

