ವಿವಿಧ ಸಾಮಾಜಿಕ ಭದ್ರತೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಅದಾಲತ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು, ನವೆಂಬರ್ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ವಿವಿಧ ೧೫ ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ತಿಳಿಸಿದ್ದಾರೆ.
ವಿಜಯಪುರ ಉಪ ವಿಭಾಗಾಧಿಕಾರಿಗಳು ಕೋಲ್ಹಾರ ತಾಲೂಕಿನ ಹಿರೇ ಆಸಂಗಿ ಗ್ರಾಮದ ಶ್ರೀ ಗದಿಗೇಶ್ವರ ಮಠದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ಗೂಗದಡ್ಡಿ ಗ್ರಾಮದ ಲಕ್ಷೀ ದೇವಸ್ಥಾನದ ಆವರಣದಲ್ಲಿ ಹಾಗೂ ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಕಳ್ಳಕವಟಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ ಅವರು ದೇವಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಸವನಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು ಮುತ್ತಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ, ನಿಡಗುಂದಿ ತಹಶೀಲ್ದಾರ ಅವರು ಗುಡದಿನ್ನಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ, ಕೊಲ್ಹಾರ ತಹಶೀಲ್ದಾರ ಅವರು ಅರಷಣಗಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ, ಮುದ್ದೇಬಿಹಾಳ ಗ್ರೇಡ್-೨ ತಹಶೀಲ್ದಾರ ಅವರು ಜಂಗಮುರಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ತಾಳಿಕೋಟೆ ಗ್ರೇಡ್-೨ ತಹಶೀಲ್ದಾರ ಅವರು ತಾಳಿಕೋಟೆ ಪಟ್ಟಣದ ವಾರ್ಡ್ ನಂಬರ್ ೧೧ರ ನಗರೇಶ್ವರ ದೇವಸ್ಥಾನದಲ್ಲಿ, ಇಂಡಿ ಗ್ರೇಡ್-೨ ತಹಶೀಲ್ದಾರ ಅವರು ಲೋಣಿ ಕೆ.ಡಿ ಗ್ರಾಮದ ಶ್ರೀ ಭೈರಸಿದ್ದೇಶ್ವರ ದೇವಸ್ಥಾನದ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ, ಚಡಚಣ ತಹಶೀಲ್ದಾರ ಅವರು ಕನಕನಾಳ ಗ್ರಾಮದ ಶ್ರೀ ಮಹಾಳಿಂಗರಾಯ ದೇವಸ್ಥಾನದಲ್ಲಿ, ಸಿಂದಗಿ ತಹಶೀಲ್ದಾರ ಅವರು ಕೆರೂರು ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ದೇವರಹಿಪ್ಪರಗಿ ತಹಶೀಲ್ದಾರ ಅವರು ಕಡ್ಲೇವಾಡ ಪಿಸಿಎಚ್ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಹಾಗೂ ಆಲಮೇಲ ಗ್ರೇಡ್-೨ ತಹಶೀಲ್ದಾರ ಅವರು ಮೋರಟಗಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಪಿಂಚಣಿ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿಯ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಪಿಂಚಣಿ ಪಾವತಿಸಲಾಗುತ್ತಿರುವುದರಿಂದ ಸಂಬಂಧಿಸಿದ ಬ್ಯಾಂಕ್-ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದಲ್ಲಿ ತಪ್ಪದೇ ಮಾಡಿಸುವಂತೆ ಸೂಚಿಸಲಾಗಿದೆ.
ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಗಳೊಂದಿಗೆ ಗ್ರಾಮದ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಜಿಲ್ಲಾಧಿಕಾರಿಗಳು ಎಂದು ಪ್ರಕಟಣೆ ತಿಳಿಸಿದೆ.

