ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸಕ್ತ ಬೀದಿ ಬದಿ ವ್ಯಾಪಾರಸ್ಥರು ಸ್ವನಿಧಿ ಮಿತ್ರರಾಗಿ ತೊಡಗಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವ-ನಿಧಿ ಮಿತ್ರ ಕಲ್ಪನೆಯು ನೀತಿ ಮತ್ತು ತಳಮಟ್ಟದ ಅನುಷ್ಠಾನಗಳ ಮಧ್ಯ ಸಂಪರ್ಕ ಸಾಧಿಸಲು ಮಾದರಿಯಾಗಿ ಕಾರ್ಯ ನಿರ್ವಹಿಸುವುದಾಗಿದೆ. ಸಮುದಾಯದ ಸ್ವಯಂ ಸೇವಕರನ್ನು ನಂಬಿಕೆಯ ಅರ್ಹ ಸಹಾಯಕರನ್ನಾಗಿ ತೊಡಗಿಸುವ ಮೂಲಕ ಯೋಜನೆಯ ಕಾರ್ಯ ಗತಗೊಳಿಸುವಿಕೆಯನ್ನು ಬಲಪಡಿಸುವುದು.
ಬೀದಿ ಬದಿ ವ್ಯಾಪಾರಸ್ಥರು ಈಗಾಗಲೇ ೨ನೇ ಕಂತಿನ ಸಾಲ ಮರು ಪಾವತಿಸಿ ೩ನೇ ಕಂತಿಗೆ ಅರ್ಜಿ ಸಲ್ಲಿಸಿದವರಾಗಿರಬೇಕು. ಸಾಲ ಪಡೆದು ಸರ್ಕಾರದ ವಿವಿಧ ಯೋಜನೆಗಳಾದ ಆರ್ಥಿಕ ಮತ್ತು ಸಾಮಾಜಿಕ ಯೋಜನೆಗಳ ಸದುಪಯೋಗ ಪಡೆದಿರಬೇಕು ಹಾಗೂ ಅರ್ಜಿ ಸಲ್ಲಿಸುವ ಬೀದಿ ಬದಿ ವ್ಯಾಪಾರಸ್ಥರು ಕನಿಷ್ಠ ೧೮ ರಿಂದ ೫೫ ವರ್ಷ ವಯೋಮಾನದವರಾಗಿರಬೇಕು.ಕನಿಷ್ಠ ೧೦ನೇ ತರಗತಿ ಪಾಸಾಗಿರಬೇಕು.
ಈ ಯೋಜನೆಯಡಿ ಎರಡನೇ ಹಂತದ ಸಾಲವನ್ನು ಯಶಸ್ವಿಯಾಗಿ ಮರುಪಾವತಿಸಿದ ಅರ್ಹ ಬೀದಿ ಬದಿ ವ್ಯಾಪಾರಿಗಳು ಪಾಲಿಕೆಯ ಡೇ-ನಲ್ಮ್ ವಿಭಾಗದಲ್ಲಿ ಅರ್ಜಿ ನಮೂನೆ ಪಡೆದು ನವೆಂಬರ್ ೧೫ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

