ರಾಜ್ಯ ನಾಟಕ ಬರಹಗಾರರ (ಕವಿಗಳ ) ಪ್ರಥಮ ವಿಜಯಪುರ ಜಿಲ್ಲಾ ಕವಿ ಸಮ್ಮೇಳನ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರದಲ್ಲಿ ಡಿ.25 ರಂದು ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ) ಸಂಘದ ಜಿಲ್ಲಾ ಘಟಕವು ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಕವಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದ ಕವಿ ಚಂದ್ರಶೇಖರರಾವ್ ಬೈರಿಪಾಟೀಲ (ಧಣಿಗಳು) ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ನಾಟಕ ಬರಹಗಾರರ (ಕವಿಗಳ ) ಸಂಘದ ಜಿಲ್ಲಾ ಅಧ್ಯಕ್ಷ ವಾಯ್.ಎಚ್.ಅಂಗಡಗೇರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಜರುಗಿತು. ಸಭೆಯಲ್ಲಿ ರಾಜ್ಯ ಸಂಚಾಲಕ ರಾಘವೇಂದ್ರ ಉಮ್ಮರಗಿ, ಗೌರವಾಧ್ಯಕ್ಷ ಸಿದ್ದಪ್ಪ ಅಲಗೋಡ, ಉಪಾಧ್ಯಕ್ಷ ಶಿವಾನಂದ ಡೆಂಗಿ, ಸಂಘಟನಾ ಕಾರ್ಯದರ್ಶಿ ಭೀಮಪ್ಪ ಹೊನವಾಡ, ಕಾರ್ಯದರ್ಶಿ ಗುಂಡು ಕುಂಬಾರ, ಸದಸ್ಯರುಗಳಾದ ಮಲ್ಲಿಕಾರ್ಜುನ ಆಗಸರ, ಸದಾಶಿವ ಕೊಲಕಾರ, ಅನಿಲ ಜಾದವ, ಎಂ. ಎಸ್. ಕರಡಿ, ರವಿ ಚಲವಾದಿ, ಮುತ್ತು ಬಳಗಾನೂರ, ಮಲ್ಲಿಕಾರ್ಜುನ ಮಸಬಿನಾಳ (ಹೆಬ್ಬಾಳ ) ಇತರರು ಇದ್ದರು ಎಂದು ತಿಳಿಸಿದ್ದಾರೆ.
ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಃ ಕರ್ನಾಟಕ ನಾಟಕ ಬರಹಗಾರರ (ಕವಿಗಳ ) ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಅರ್ಜಿ ಸಲ್ಲಿಸಬಹುದು. ರಂಗಭೂಮಿ ನಟಿಯರಿಗೆ( ಮಹಿಳಾ ವಿಭಾಗದಿಂದ) ಅಮೀರಭಾಯಿ ಪ್ರಶಸ್ತಿ, ನಾಟಕ ನಿರ್ದೇಶಕರಿಗೆ ಅಶೋಕ ಬಾದರದಿನ್ನಿ ಪ್ರಶಸ್ತಿ, ನಟರಿಗೆ (ಪುರುಷರ ವಿಭಾಗದಿಂದ) ಹಂದಿಗನೂರು ಸಿದ್ದರಾಮಪ್ಪ ಪ್ರಶಸ್ತಿ, ನಾಟಕ ಸಂಗೀತಗಾರರಿಗೆ ಶ್ರೀನಿವಾಸ ತಾವರಗಿರಿ ಪ್ರಶಸ್ತಿ, ಸ್ಟೇಜ್ ಮಾಲೀಕರಿಗೆ ರಂಗ ಸಜ್ಜಿಕೆ ಪ್ರಶಸ್ತಿ ನೀಡಲಾಗುತ್ತಿದೆ.
ಈ ಪ್ರಶಸ್ತಿಗಳಿಗೆ ನ.25 ರೊಳಗೆ ವಾಯ್.ಎಚ್.ಅಂಗಡಗೇರಿ ಜಿಲ್ಲಾಧ್ಯಕ್ಷರು, ಕರ್ನಾಟಕ ನಾಟಕ ಬರಹಗಾರರ ಕವಿಗಳ ಸಂಘ, ವಿಜಯಪೂರ.ಸಾ.ನಾಗೂರ-586203, ತಾಲೂಕು ಬಸವನಬಾಗೇವಾಡಿ, ಜಿಲ್ಲೆ ವಿಜಯಪುರ ಈ ವಿಳಾಸಕ್ಕೆ ತಮ್ಮ ಸ್ವವಿವರವುಳ್ಳ ಅರ್ಜಿಯನ್ನು ಕಳಿಸಿಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ 9686356134,9901520377,9741043964 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ ) ಸಂಘದ ಜಿಲ್ಲಾ ಅಧ್ಯಕ್ಷ ವಾಯ್.ಎಚ್.ಅಂಗಡಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

