ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಪಲಾಯನವಾದಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸುತ್ತಿಲ್ಲ, ಬದಲಾಗಿ ಬರಿ ಹಿಂದು – ಮುಸ್ಲಿಂರ ನಡುವೆ ಬಿರುಕು ಹುಟ್ಟಿಸುವ ಮಾತು ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡ ಹಮೀದ್ ಮುಶ್ರೀಫ್ ಕಿಡಿಕಾರಿದರು.
ನಗರದಲ್ಲಿ ಟಿಪ್ಪು ಸುಲ್ತಾನ ವೃತ್ತದಲ್ಲಿ ಸೋಮವಾರದಂದು ಟಿಪ್ಪು ಸುಲ್ತಾನ್ ಸಂಘಟನೆ ವತಿಯಿಂದ ನಡೆದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಶಾಸಕ ಆರ್.ಎಸ್.ಎಸ್. ಬ್ಯಾನ್ ಕುರಿತು ಮಾತನಾಡುವದನ್ನು ಬಿಟ್ಟು ಆದರೆ ಮಸೀದಿಯಲ್ಲಿ ಧ್ವನಿವರ್ಧಕ ಬ್ಯಾನ್ ಕುರಿತು ಮಾತನಾಡುತ್ತಾರೆ ಎಂದು ದೂರಿದರು.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಮುಖಂಡ ಶ್ರೀನಾಥ್ ಪೂಜಾರಿ ಮಾತನಾಡಿ, ದೇಶದಲ್ಲಿ ಹಿಂದೆ ಟಿಪ್ಪು ಸುಲ್ತಾನ್ ಅವರನ್ನು ಕಂಡರೆ ಬ್ರಿಟಿಷರು ಅಂಜುತ್ತಿದ್ದರು. ಆದರೆ ಇಂದು ಟಿಪ್ಪು ಸುಲ್ತಾನ್‌ಗೆ ಬಿಜೆಪಿ ಪಕ್ಷದವರು ಹೆದರುತ್ತಿದ್ದಾರೆ. ಯಾರೇ ಏನೆ ಅಂದರೂ ಟಿಪ್ಪು ಸುಲ್ತಾನ್ ಜಯಂತಿ ನಿಲ್ಲುವದಿಲ್ಲ ಎಂದು ದಿಟ್ಟ ನುಡಿಗಳನ್ನಾಡಿದರು.
ಎಂಎಂಡಿಸಿ ಮುಖಂಡ ಬಿ ಎಚ್ ಮಹಾಬರಿ ಮಾತನಾಡಿ, ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಹಳ್ಳಿ ಮಾತನಾಡಿ, ಸಮಾಜಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಬಹಳ ದೊಡ್ಡದು. ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಟಿಎಸ್‌ಎಸ್ ಸಂಘಟನೆಯ ಅಧ್ಯಕ್ಷ ಇರಫಾನ್ ಶೇಖ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನ್ ಅವರ ತ್ಯಾಗ, ಬಲಿದಾನ ಮರೆಯಲಾಗದು. ಇಂಥಹ ಮಹಾನ್ ನಾಯಕರ ಕುರಿತು ಹಗುರವಾಗಿ ಮಾತನಾಡಿದ ನಗರ ಶಾಸಕ ಬಸನಗೌಡ ಯತ್ನಾಳ ವಿರುದ್ದ ತೀವ್ರ ಕಿಡಿಕಾರಿದರು.
ಈ ಕಾರ್ಯಕ್ರಮದಲ್ಲಿ ಹಾಸಿಂಪೀರ ದರ್ಗಾದ ವಂಶಸ್ಥ ಜೈನುಲಾಬ್ದಿನ್ ಪೀರಾ, ಮುಖಂಡರಾದ ಅಪ್ಪ ಸಾಬ್ ಯರ್ನಾಳ, ಮಹಾನಗರ ಪಾಲಿಕೆಯ ಸದಸ್ಯರಾದ ಅಬ್ದುಲ್‌ರಜಾಕ್ ಹೋರ್ತಿ, ಅಪ್ಪು ಪೂಜಾರಿ ಸೇರಿದಂತೆ ಅಲ್ತಾಫ್ ಇಟಗಿ, ಹಾಫಿಜ್ ಸಿದ್ಧಿಕಿ, ಎಚ್ ಆರ್ ಭಗವಾನ್, ಅಷ್ಪಾಕ್ ಮನಗೂಳಿ, ಇಲಿಯಾಸ್ ಸಿದ್ದಿಕಿ, ಅಲ್ಲಾಭಕ್ಷ ಬಡೇಗಾರ, ಶಕೀಲಬಾಗ್ ಮಾರೆ, ರಜಾಕ್ ಸಾಬ್ ಮೇಟಿ, ಮಹಾದೇವ್ ರಾವಜಿ, ರಫೀಕ್ ಸೌದಾಗರ್, ಗೌಸ್ ಹವಾಲ್ದಾರ್, ಅಕ್ರಮ ಮಾಶಾಳಕರ್, ಅಲ್ತಾಫ್ ಲಕ್ಕುಂಡಿ, ಇಮ್ರಾನ್ ಜಾಗಿರ್ದಾರ್, ಅರುಣ್ ಭಜಂತ್ರಿ, ಮುನ್ನಾ ಬಕ್ಷಿ, ಇಮಾಮ್ ಮುಲ್ಲಾ, ತಾಜುದ್ದೀನ್ ಖಲೀಫಾ, ಹಮೀದ್ ಅಥಣಿ, ನಾಸಿರ್ ನಾಗರಬೌಡಿ, ಜಿಯಾ ಪಠಾನ್, ಸೈಯದ್ ಕಾದ್ರಿ ಗುಲಗುಂಟಿ, ನಿಜಾಮುದ್ದೀನ್ ಹಿರಿಯಾಳ, ಮುಸ್ತಫಾ ಅಲ್ಮೆಲ್, ಮೊಮ್ಮದ್ ರಫೀಕ್ ಗುರಿಕಾರ್, ಹಿದಾಯತ್ ಮಾಶಾಳಕರ್, ಮುನ್ನಾ ಮುಲ್ಲಾ, ಹಾಜಿ ನದಾಫ್, ಹನ್ನಾನ್ ಶೇಖ, ಈಸಾಕ್ ಲಕುಂಡಿ, ಹೊಸ ಲಕ್ಕುಂಡಿ, ಆಬಿದ್ ಇಮಾರತವಾಲೆ, ಸಾಧಿಕ್ ಇಮಾರತವಾಲೆ, ಏಜಾದ್ ಕಲಾದಗಿ, ಆಫತಾಭ ಕೋಲಾಪುರ್, ತಾಳಿಕೋಟಿಯ ಮುರ್ತುಜಾ, ಮೆಹಬೂಬ್ ನಾಯ್ಕೋಡಿ, ಅಗಸಬಾಳ, ಸೇರಿದಂತೆ ಟಿಎಸ್‌ಎಸ್ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಟಿಪ್ಪು ಅಭಿಮಾನಿಗಳು ಭಾಗವಹಿಸಿದ್ದರು.

