ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು “ಉದಯರಶ್ಮಿ” ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಅಶೋಕ ಯಡಳ್ಳಿ, ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.

