ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಭಾಗದ ಜನರಿಗೆ ನಿತ್ಯ ಸಂಚರಿಸಲು ಗ್ರಾಮೀಣ ರಸ್ತೆಗಳ ಸುಧಾರಣೆ ಅವಶ್ಯಕವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಖಾನಾಪುರ ಗ್ರಾಮದಲ್ಲಿ ನಡೆದ ಜಿಲ್ಲಾ ಪಂಚಾಯತ ವಿಜಯಪುರ ಪಂ.ರಾ.ಇಂ. ಉಪ ವಿಭಾಗ ಸಿಂದಗಿ ಸನ್ ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ಖಾನಾಪುರ ಗ್ರಾಮದಿಂದ ಮಾರಿಹಳ್ಳ ಹೋಗುವ ರಸ್ತೆಗೆ ೧೦ ಲಕ್ಷದ ವೆಚ್ಚದ ರಸ್ತೆಗೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ನಂತರ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸುಧಾರಣೆಗೆ ತಾಲೂಕಿನಲ್ಲಿ ಅನೇಕ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನಕ್ಕಿದ್ದು ವಿವಿಧ ಯೋಜನೆಗಳಡಿ ಅನುದಾನ ತರುವ ಮೂಲಕ ಹಂತ-ಹಂತವಾಗಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವುದಾಗಿ ಹೇಳಿದರಲ್ಲದೇ ಸರಕಾರದಿಂದ ಅನುದಾನ ತಂದು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಮೌನಯೋಗಿ ಕಲ್ಯಾಣದಯ್ಯ ಸ್ವಾಮಿಗಳು, ಕಾಂಗ್ರೆಸ್ ಮುಖಂಡರಾದ ವಿಜುಗೌಡ ನಿಂಗನಗೌಡ ಬಿರಾದಾರ, ರವಿರಾಜ್ ದೇವರಮನಿ, ಬಸನಗೌಡ ಉಳ್ಳೆಸೂರ, ರುದ್ರಣ್ಣಸಾಹುಕಾರ ಮಾನಶೆಟ್ಟಿ, ಮಹೇಶ್ ಮನಗೂಳಿ, ಶರಣಗೌಡ ಪಾಟೀಲ, ಪತ್ರಕರ್ತ ಎ ಡಿ ಕೋರವಾರ, ಅಲ್ಲಾಹುದ್ದೀನ್ ಮುಲ್ಲಾ, ಪುಂಡಲೀಕ್ ರಾಠೋಡ, ಮೇಘರಾಜ್ ಚವ್ಹಾಣ, ಭೀಮಾಶಂಕರ ಯಳಮೇಲಿ ಸೇರಿದಂತೆ ಹಾಗೂ ಗ್ರಾಮಸ್ಥರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

