ಇಂದು (೨೪ ಅಕ್ಟೋಬರ, ಶುಕ್ರವಾರ) ವಿಶ್ವಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ ಖೊದ್ನಾಪೂರ
(ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಇಡೀ ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೊನೆಯ ಮಾತು ಹೀಗಿತ್ತು. “ನನ್ನನ್ನು ಮಣ್ಣು ಮಾಡುವಾಗ ನನ್ನ ಕೈಗಳನ್ನು ಮಾತ್ರ ಆಚೆ ಇರಿಸಿ ಮಣ್ಣು ಮಾಡಿ” ಎಂದು. ಈ ಮಾತಿನ ಅರ್ಥ ಈಷ್ಟೇ. ಅದರಿಂದ ಎಲ್ಲರೂ ತಿಳಿಯಲಿ ಪ್ರಲಂಚವೇ ಗೆದ್ದ ನನ್ನ ಕೈಯಲ್ಲಿ ಕೊನೆಗೆ ಏನೂ ಇರಲಿಲ್ಲವೆಂದು. ಅದಕ್ಕಂತಲೇ ಗೌತುಮ ಬುದ್ಧ ಅವರು, “ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವಾದ ವಿಜಯವಾಗಿದೆ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯು ಒಂದು ಅಂತರ ಸರ್ಕಾರಿಯ ಸಂಘಟನೆಯಾಗಿದ್ದು, ಅದು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಶಾಂತಿ, ಸಹಕಾರ ಸುಭದ್ರತೆ, ಉತ್ತಮ ಅಂತರಾಷ್ಟ್ರೀಯ ಸಂಬಂಧಗಳು ಏರ್ಪಡುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ಇರುವ ಕೇಂದ್ರವಾಗಿದೆ.

ವಿಶ್ವಸಂಸ್ಥೆಯ ಸ್ಥಾಪನೆಯ ಹಿನ್ನೆಲೆ
ಎರಡನೇಯ ಜಾಗತಿಕ ಯುದ್ಧದ ನಂತರ ರಾಷ್ಟçಗಳ ಮಧ್ಯೆ ಮುಂದೆ ನಡೆಯಬಹುದಾದ ಯುದ್ಧಗಳನ್ನು ತಡೆಯುವ ಏಕಮೇಯ ಉದ್ಧೇಶದಿಂದ ಹಾಗೂ ಜಗತ್ತಿನಾದ್ಯಂತ ಎಲ್ಲ ರಾಷ್ಟçಗಳ ಮಧ್ಯೆ ಸುಮಧುರ ಸಂಬಂಧವನ್ನು ಏರ್ಪಡಿಸಲು ಹಾಗೂ ಉತ್ತಮ ಸ್ನೇಹಪರವಾದ ಪರಿಸರವನ್ನು ನಿರ್ಮಾಣ ಮಾಡಲು ೨೫ ನೇಯ ಏಪ್ರೀಲ್ ೧೯೪೫ ರಂದು ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ಮುಂದೆ ಜೂನ್ ೨೫ ರಂದು ಸ್ಯಾನ ಫ್ರಾನ್ಸಿಸ್ಕೋದಲ್ಲಿ ನಡೆದ ಸಭೆಯಲ್ಲಿ ೫೦ ರಾಷ್ಟçಗಳು ಒಮ್ಮತ ಅಭಿಪ್ರಾಯವನ್ನು ನೀಡಿದ ನಂತರ, ವಿಶ್ವಸಂಸ್ಥೆಯ ಕಾಯಿದೆ ಮತ್ತು ಚಾರ್ಟರ್‌ನ್ನು ರೂಪಿಸಲಾಯಿತು. ಅದಕ್ಕಾಗಿ ಜಗತ್ತಿನಾದ್ಯಂತ ಪ್ರತಿವರ್ಷ ೨೪ ನೇಯ ಅಕ್ಟೋಬರ ರಂದು ವಿಶ್ವಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಅಕ್ಟೋಬರ ೨೪, ೧೯೪೫ ರಂದು ಅದು ತನ್ನ ಕಾರ್ಯವನ್ನು ಪ್ರಾರಂಭಿಸಿತು. ಅಂದಿನ ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರಾಗಿದ್ದ ಫ್ರಾö್ಯಂಕ್ಲೀನ್. ಡಿ. ರೂಸವೆಲ್ಟ್ರವರು೧ ನೇಯ ಜನೇವರಿ ೧೯೪೨ ರಲ್ಲಿ ಮೊಟ್ಟಮೊದಲು ವಿಶ್ವಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಕನಸು ಕಂಡರು. ಅವರ ದೂರದೃಷ್ಟಿತ್ವ ಮತ್ತು ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಅಂದಿನಿಂದ ಇವತ್ತಿನವರೆಗೂ ವಿಶ್ವಸಂಸ್ಥೆಯು ಎಲ್ಲ ರಾಷ್ಟ್ರಗಳ ನಡುವೆ ಶಾಂತಿ-ಸಹಕಾರ, ಸಾಮರಸ್ಯತೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಈ ಸಂಸ್ಥೆಯಡಿಯಲ್ಲಿ ಒಟ್ಡು ೧೯೩ ರಾಷ್ಟçಗಳು ಸದಸ್ಯ ರಾಷ್ಟ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಯ ಎಲ್ಲ ಉದ್ಧೇಶಗಳು ಹಾಗೂ ಕಾರ್ಯಚಟುವಟಿಕೆಗಳು ಚಾಪ್ಟರ್‌ನಲ್ಲಿ ನಮೂದಿಸಿದ ತತ್ವಗಳು ಮತ್ತು ನಿರ್ದೇಶನಕ್ಕೆ ಒಳಪಟ್ಟಿರುತ್ತವೆ.
ವಿಶ್ವಸಂಸ್ಥೆಯ ಕಾರ್ಯನಿರ್ವಹಣೆಯ ರಚನೆ
ಈ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ಎಲ್ಲ ೧೯೩ ರಾಷ್ಟçಗಳು ಸಾಮಾನ್ಯ ಸಭೆಯ ಸದಸ್ಯ ರಾಷ್ಟ್ರಗಳಾಗಿರುತ್ತವೆ. ಈ ರಾಷ್ಟ್ರಗಳು ಭದ್ರತಾ ಸಭೆಯಲ್ಲಿ ತೀರ್ಮಾನಿಸಿದಂತೆ ಹಾಗೂ ಬದ್ಧರಾಗಿ ನಡೆದುಕೊಳ್ಳಬೇಕಾಗಿರುತ್ತದೆ. ಇದರ ಅಡಿಯಲ್ಲಿ ಜನರಲ್ ಅಸೆಂಬ್ಲಿ, ಸೆಕ್ಯುರಿಟಿ ಕೌನ್ಸಿಲ್, ಆರ್ಥಿಕ ಹಾಗೂ ಸಾಮಾಜಿಕ ಕೌನ್ಸಿಲ್, ಧರ್ಮದರ್ಶಿ ಕೌನ್ಸಿಲ್, ಅಂತರಾಷ್ಟ್ರೀಯ ನ್ಯಾಯಾಲಯ ಮತ್ತು ಯುನೈಟೆಡ್ ಸೆಕ್ರೆಟರೇಟ್ ನಂತಹ ಅಧೀನ ಹಾಗೂ ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಈ ಸಂಸ್ಥೆಯು ಅಕ್ಟೋಬರ ೨೪, ೧೯೪೫ ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಪ್ರಸ್ತುತ ಕೇಂದ್ರ ಕಚೇರಿಯು ನ್ಯೂಯಾರ್ಕನಲ್ಲಿದೆ. ಅಂಟಾನಿಯೋ ಗುಟ್ಟಾರಿಸ್ ಎಂಬುವವರು ವಿಶ್ವಸಂಸ್ಥೆಯ ೯ನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ಯುನಿಶೆಪ್, ಯುನೆಸ್ಕೊ ಇವು ಇದರ ಸಹಾಯಕ ಅಂಗ ಸಂಸ್ಥೆಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವನ್ನು ಕೈಗೊಳ್ಳುತ್ತಿವೆ.
೨೦೨೫ ನೇಯ ವರ್ಷದ ಘೋಷವಾಕ್ಯ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ವಿಶೇಷವಾದ ಧ್ಯೇಯವಾಕ್ಕ “ಸಹಕಾರದಿಂದ ಉತ್ತಮ ಜಗತ್ತು ನಿರ್ಮಾಣ” ಎಂಬ ಮಹೋನ್ನತವಾದ ಉದ್ಧೇಶದಿಂದ ವಿಶ್ವದೆಲ್ಲೆಡೆ ರಾಷ್ಟçಗಳ ಮಧ್ಯೆ ಶಾಂತಿ, ಸಹಕಾರ, ಉತ್ತಮ ಬಾಂಧವ್ಯ ಮತ್ತು ಸಮನ್ವಯತೆ ಮತ್ತು ಸಾಮರಸ್ಯತೆಯನ್ನು ಸಾಧಿಸುತ್ತಿದೆ. ಃeಣಣeಡಿ ಣogeಣheಡಿ: ೮೦ ಥಿeಚಿಡಿs ಚಿಟಿಜ moಡಿe ಜಿoಡಿ ಠಿeಚಿಛಿe, ಜeveಟoಠಿmeಟಿಣ ಚಿಟಿಜ humಚಿಟಿ ಡಿighಣs” ಎಂಬ ಘೋಷವಾಕ್ಯದೊಂದಿಗೆ ಜಗತ್ತಿನೆಲ್ಲೆಡೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವದರೊಂದಿಗೆ ಜಗತ್ತಿನಲ್ಲಿ ಶಾಂತಿ-ಸುಭದ್ರತೆ, ಸುರಕ್ಷತೆ, ಮಾನವ ಹಕ್ಕುಗಳ ರಕ್ಷಣೆ, ಮಾನವೀಯ ಮೌಲ್ಯಗಳು, ಸುಸ್ಥಿರ ಅಭಿವೃದ್ಧಿಗಾಗಿ ಉತ್ತೇಜನ ಹಾಗೂ ಅಂತರಾಷ್ಟ್ರೀಯ ನ್ಯಾಯದ ಎತ್ತಿ ಹಿಡಿಯುವುದರ ಮೂಲಕ ರಾಷ್ಟ್ರ-ರಾಷ್ಟ್ರಗಳಲ್ಲಿ ಸಹೋದರತೆ, ನೆರೆಹೊರೆಯತ್ವ, ಸಹಕಾರ ಮತ್ತು ಉತ್ತಮ ಸಂಬಂಧಗಳನ್ನು ಏರ್ಪಡಿಸಿ ವಿಶ್ವದಲ್ಲಿ ಐಕ್ಯತೆ ಮತ್ತು ಸಮಗ್ರತೆಯನ್ನು ಸಾಧಿಸುವುದೇ ಇದರ ಮಹೋನ್ನತವಾದ ಧ್ಯೇಯವಾಗಿದೆ.
ಕೊನೆಯ ನುಡಿ
ಈ ಸಂಸ್ಥೆಯು ಜಾಗತಿಕವಾಗಿ ರಾಷ್ಟçಗಳ ನಡುವೆ ಉತ್ತಮ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸುಮಧುರ ಬಾಂಧವ್ಯವನ್ನು ಬೆಸೆಯುವಂತೆ ಮಾಡುತ್ತಿದೆ. ರಾಷ್ಟçಗಳ ಮಧ್ಯೆ ಸಹಕಾರ, ಸಹೋದರತೆಯನ್ನು ಸಶಕ್ತಗೊಳಿಸುತ್ತಾ, ವಿಶ್ವಶಾಂತಿ ಶಾಂತಿಗಾಗಿ ಸಂದೇಶ ಸಾರುತ್ತದೆ. ವಿಶ್ವಸಂಸ್ಥೆಯು ಯುದ್ಧಗಳನ್ನು ತಡೆಯಲು, ಶಾಂತಿಯುತ ಮಾತುಕತೆಗಳನ್ನು ಪ್ರೋತ್ಸಾಹಿಸುವಲ್ಲಿ ಅಮೂಲ್ಯವಾದ ಪಾತ್ರ ನಿರ್ವಹಿಸುತ್ತಿದೆ. ಸಂಘರ್ಷ-ಯುದ್ದದಂತಹ ಸಂದರ್ಭಗಳಲ್ಲಿ ಎರಡು ಪಕ್ಷಗಳ ಮತ್ತು ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪಿಸುವಲ್ಲಿ, ವಿಶ್ವಶಾಂತಿ ಮತ್ತು ಶಾಂತಿ ಪಾಲನೆಗಾಗಿ ಕರೆ ನೀಡುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು, ಸ್ನೇಹ-ಸಂಬಂಧವನ್ನು ಬೆಳೆಸುವುದು ಮತ್ತು ಸಂಘರ್ಷಗಳನ್ನು ಶಾಂತಿಯುತವಾದ ರೀತಿಯಲ್ಲಿ ಬಗೆಹರಿಸುವ ಸಹಾಯ ಮಾಡುವಲ್ಲಿ ವಿಶ್ವಸಂಸ್ಥೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಅದು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮ-ಯೋಜನೆಗಳನ್ನು ಹಮ್ಮಿಕೊಂಡು ಅವುಗಳಿಗೆ ಬೇಕಾದ ಆರ್ಥಿಕ ನೆರವನ್ನು ಸಹ ನೀಡುತ್ತದೆ. ಪರಿಸರ ಸಂರಕ್ಷಣೆ, ಯುದ್ಧ ತಡೆಯುವುದು, ಜಾಗತಿಕ ವಿಪತ್ತು ನಿರ್ವಹಣೆ ಮತ್ತು ನಿಯಂತ್ರಣ ಮತ್ತು ಕೊರೋನಾದಂತಹ ಜಾಗತಿಕ ಸಾಂಕ್ರಾಮಿP Àರೋಗವನ್ನು ತಡೆಗಟ್ಟಲು ಅವಶ್ಯಕ ಮುಂಜಾಗ್ರತಾ ಕ್ರಮ ಮತ್ತು ಪರಿಹಾರ ಕ್ರಮಗಳನ್ನು ಕೈಗೊಂಡು ಜಾಗತಿಕ ಮಟ್ಟದಲ್ಲಿ ಎಲ್ಲ ಜನರು ಶಾಂತಿ-ಸಹಕಾರ, ಸಹಬಾಳ್ವೆಯಿಂದ ಬದುಕಿ ತಮ್ಮ ಆರೋಗ್ಯ ಮತ್ತು ಸ್ವಾಸ್ಥö್ಯವನ್ನು ಉತ್ತಮವನ್ನಾಗಿಸಲು ವಿಶ್ವಸಂಸ್ಥೆಯು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ವಿಶ್ವಸಂಸ್ಥೆಯು ಜಗತ್ತಿನ ಎಲ್ಲ ರಾಷ್ಟçಗಳ ನಡುವೆ ಉತ್ತಮ ಬಾಂಧವ್ಯ ಬೆಸೆದು ಇಡೀ ಜಗತ್ತು ಒಂದು ಕುಟುಂಬವಾಗಿ ರಾಷ್ಟçಗಳೆಲ್ಲವೂ ಕುಟುಂಬದ ಸದಸ್ಯರಾಗಿ ಒಂದೇ ಎಂಬ ಭಾವದೊಂದಿಗೆ ಅಭಿವೃದ್ಧಿ ಸಾಧಿಸುವತ್ತ ಸಾಗಬೇಕೆಂಬುದೇ ನನ್ನದೊಂದು ಆಶಯವಾಗಿದೆ.


