ಉದಯರಶ್ಮಿ ದಿನಪತ್ರಿಕೆ
ಇಂಡಿ: ೨೦೨೫-೨೬ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಮತ್ತು ಭೀಮಾ ನದಿಯಿಂದ ಉಂಟಾಗಿರುವ ಪ್ರವಾಹದಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ಸರಕಾರದ ಮಾರ್ಗಸೂಚಿಯಂತೆ ಬೆಳೆ ಹಾನಿ ಸಮೀಕ್ಷೆಯನ್ನು ಕೃಷಿ, ತೋಟಗಾರಿಕೆಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ತಣಡವನ್ನು ರಚಿಸಿ ಜಂಟಿ ಸಮೀಕ್ಷೆ ಮಾಡಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ೬೪೦೭೨ ಹೆಕ್ಟರ ಪ್ರದೇಶದಲ್ಲಿ ತೊಗರಿ, ಮೆಕ್ಕೆಜೋಳ, ಹತ್ತಿ, ಮತ್ತು ಈರುಳ್ಳಿ ಬೆಳೆಗಳ ಹಾನಿಯ ಜಂಟಿ ಸಮೀಕ್ಷೆಯ ವರದಿಯನ್ನು ಗ್ರಾ.ಪಂ ಗ್ರಾಮಗಳಲ್ಲಿ ನೋಟಿಸ ಬೋರ್ಡು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಪಡಿಸಲಾಗಿದೆ.
ಈ ಕುರಿತು ರೈತರಲ್ಲಿ ಹಾನಿ ಕ್ಷೇತ್ರ, ಬೆಳೆಗಳ ವಿವರ, ಮತ್ತು ನೀರಾವರಿ ಮಳೆಯಾರ್ಷಿತ ಕುರಿತಂತೆ ಯಾವುದೇ ಆಕ್ಷೆಪಣೆಗಳಿದ್ದಲ್ಲಿ ತಕ್ಷಣ ಸುಕ್ತ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ತಹಸೀಲ್ದಾರ ಕಚೇರಿಗೆ ಅಕ್ಷೆಪಣೆಸಲ್ಲಿಸಬಹುದು.
ಪರಿಹಾರ ಸಂದಾಯವಾಗಲು ಪ್ರುಟ್ ಐಡಿ ಕಡ್ಡಾಯ ವಾಗಿದ್ದು ಪ್ರುಟ್ ಐಡಿ ಎಫ್ ಐ ಡಿ ಯಾಗದ ರೈತರು ಕೂಡಲೆ ಆಧಾರ ಬ್ಯಾಂಕ ಪಾಸಬುಕ್ ಮತ್ತು ಎಲ್ಲ ಉತಾರಿಗಳನ್ನು ಸಂಬಂದಪಟ್ಟ ರೈತಸಂಪರ್ಕ ಕೇಂದ್ರದಲ್ಲಿ ನಿಡಿ ಪ್ರುಟ್ ಐಡಿ ಮಾಡಿಸಿಕೊಳ್ಳಲು ರೈತರಲ್ಲಿ ಏವೂರ ವಿನಂತಿಸಿದ್ದಾರೆ.
ಭೀಮಾ ನದಿ ಪ್ರವಾಹ ಹಾಗೂ ಸತತ ವಾಗಿ ಸುರಿದ ಭಾರಿ ಮಳೆಯಿಂದ ಬೆಳೆ ಹಾನಿ ಯಾದ ಪರಿಹಾರ ಲಿಸ್ಟನ್ನು ಚೋರಗಿ, ಚವಡಿಹಾಳ ಮತ್ತು ಚಿಕ್ಕಬೇವನೂರ ಗ್ರಾಮದಲ್ಲಿ ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಹಾಗೂ ಕಂದಾಯ ನಿರೀಕ್ಷಕ ಪಿ,ಜೆ.ಕೊಡಹೊನ್ನ, ಬಳ್ಳೊಳ್ಳಿ ಯಲ್ಲಿ ಗ್ರಾಮ ಆಡಳಿತಾಧಿಕಾರಿ ಎಸ್.ಜೆ ಹಂಚಿನಾಳ, ಗ್ರಾಮಸ್ಥರ ಸಮ್ಮುಖದಲ್ಲಿ ಲಿಸ್ಟ ಪ್ರಚುರ ಪಡಿಸಿದ್ದುನೋಟಿಸ ಬೋರ್ಡಗೆ ಅಂ ಟಿಸಲಾಗಿದೆ ಎಂದು ಏವೂರ ತಿಳಿಸಿದ್ದಾರೆ.