ಉದಯರಶ್ಮಿ ದಿನಪತ್ರಿಕೆ
ಚಡಚಣ: ಬರಡೋಲ ಗ್ರಾಮದಲ್ಲಿ ಶನಿವಾರ ಉಪವಿಭಾಗಾಧಿಕಾರಿ ಇಂಡಿ ಇವರ ಆದೇಶದನ್ವಯ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಸರಕಾರದ ಜನಕಲ್ಯಾಣ ಯೋಜನೆಗಳು ಗ್ರಾಮ ಮಟ್ಟದಲ್ಲಿ ಫಲಾನುಭವಿಗಳಿಗೆ ತಲುಪುವಲ್ಲಿ ಸಹಾಯಕವಾದ ಪಿಂಚಣಿ ಅದಾಲತ್ ಕಾರ್ಯಕ್ರಮ ಜರುಗಿತು.
ಚಡಚಣ ಉಪ ತಹಶೀಲದಾರ ಕೆ.ವಾಯ್.ಹೊಸಮನಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರದಿಂದ ಬಡ ಹಾಗೂ ವಿಧವೆಯರು,ವಯೊವೃದ್ಧ ಮಹಿಳೆ ಅಥವಾ ಪುರುಷರು, ಸುಕನ್ಯೆಯರು, ವಿಕಲಚೇತನರಿಗೆ ಹೀಗೆ ಹಲವಾರು ಯೋಜನೆಗಳ ಸರಕಾರದ ಜನಕಲ್ಯಾಣ ಯೋಜನೆಗಳಲ್ಲಿ ಒಂದಾದ (ಮಾಶಾಸನ)ಪಿಂಚಣಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತವೆ ಎಂದು ಹೇಳಿದರು.
ಬರಡೋಲ ಗ್ರಾಮದಿಂದ ವಿವಿಧ ಯೋಜನೆಗಳಲ್ಲಿ ೧೨ ಜನರು ನಮ್ಮ ಚಡಚಣ ತಹಶೀಲ್ದಾರ ಕಾರ್ಯಾಲಯಕ್ಕೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರು ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ಯನ್ನು ಕೊಟ್ಟಿದ್ದಾರೆ ಅದರ ಫಲವಾಗಿ ಇಂದು ಪಿಂಚಣಿ ಅದಾಲತ್‌ನಲ್ಲಿ ವಿವಿಧ ಯೋಜನೆಗಳಲ್ಲಿ ೧೨ ಫಲಾನುಭವಿಗಳನ್ನು ಆಯ್ಕೆಮಾಡಿ ಪಿಂಚಣಿ ಆದೇಶ ಪತ್ರವನ್ನು ನೀಡಲಾಗುತ್ತಿದೆ ಎಂದು ಉಪ ತಹಶೀಲದಾರ ಕೆ.ವಾಯ್.ಹೊಸಮನಿ ಹೇಳಿದರು.
ಈ ಸಂದರ್ಭದಲ್ಲಿ ಬರಡೋಲ ಗ್ರಾಮದ ಗಣ್ಯ ವ್ಯಕ್ತಿಗಳು ಮತ್ತು ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ೧೨ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಬರಡೋಲ ಗ್ರಾ.ಪಂ.ಸದಸ್ಯ ಹಸನಸಾಬ ಬಾಗವಾನ, ವೆಂಕಟೇಶ ಕುಲಕರ್ಣಿ, ಚಡಚಣ ಕಂದಾಯ ನಿರಿಕ್ಷಕರಾದ ಗುರುಶಾಂತ ಮಾ ಬಿರಾದಾರ ಹಾಗೂ ಸಿಬ್ಬಂಧಿಗಳು, ಬರಡೋಲ ಗ್ರಾಮ ಆಡಳಿತ ಅಧಿಕಾರಿ ಶೀವಾಜಿ ಜಾಧವ, ಊರಿನ ಗ್ರಾಮಸ್ಥರು, ಹಿರಿಯರು ಇದ್ದರು.