ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಂಧಾನದ ಮೂಲಕ ಸಮಾಧಾನ ಕಂಡುಕೊಳ್ಳುವದೇ ನಿಜವಾದ ಜಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅಭಿಪ್ರಾಯ ಪಟ್ಟರು.
ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್‌ಅದಾಲತ್ ನಲ್ಲಿ ಅವರು ಮಾತನಾಡಿದರು.
ಪಕ್ಷಗಾರರ ಕಾನೂನು ಹೋರಾಟಕ್ಕೆ ಕೇವಲ ಒಂದೇ ದಿನದಲ್ಲಿ ಸುಖಾಂತ್ಯ ಹಾಡಲು ಲೋಕ್‌ಅದಾಲತ್ ಪ್ರತೀ ೩ ತಿಂಗಳಿಗೊಮ್ಮೆ ಸಿದ್ಧವಿರುತ್ತೆ. ನಿಮ್ಮ ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಬಗೆಹರೆಸಿಕೊಳ್ಳಲು ನಿಮ್ಮ ವಕೀಲರಿಗೆ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಭೇಟಿ ಮಾಡಬಹುದು ಎಂದರು.
ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೧೧೦ ಬಾಕಿ ಇರುವ ಪ್ರಕರಣಗಳಲ್ಲಿ ೧೮೨೮ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ ಇ.ಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳ ಪೈಕಿ ಒಟ್ಟು ೮೩೯ ಪ್ರಕರಣಗಳನ್ನು ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬಿಎಸ್‌ಎನ್‌ಎಲ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು ಹೀಗೆ ಒಟ್ಟು ಸೇರಿ ೧೦೦೨ ಪ್ರಕರಣಗಳಲ್ಲಿ ೨೯೪ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್, ಹಿರಿಯ ಸಿವಿಲ್ ನ್ಯಾಯಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಇವರುಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ್ ಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ರವಿ ನಾಲತವಾಡ, ಎಚ್.ಜಿ.ನಾಗೋಡ ಮತ್ತು ಎಮ್.ಆರ್. ಮುಜಾವರ ವಕೀಲರುಗಳು ಭಾಗಿಯಾದರೆ ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ವ್ಹಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್.ಆರ್.ಸಜ್ಜನ, ಏನ್.ಜಿ.ಕುಲಕರ್ಣಿ, ಎನ್.ಆರ್.ಮೊಕಾಶಿ, ಎಂ.ಆರ್.ಪಾಟೀಲ, ಎಂ.ಎಚ್.ಕ್ವಾರಿ ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಬಿ.ಎಂ.ಮುAದಿನಮನಿ, ಆಯ್.ಎಸ್.ಹಗಟಗಿ. ಎಲ್.ಆರ್.ನಾಲತವಾಡ, ಎಸ್.ಎಂ.ಕಿಣಗಿ, ಎಲ್.ಎಸ್.ಮೇಟಿ, ಸಾಬಣ್ಣ ಚಳ್ಳಗಿ ಸೇರಿದಂತೆ ಇನ್ನೀತರ ನ್ಯಾಯವಾದಿಗಳು ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರಾದ ಅರವಿಂದ ಕುಂಬಾರ, ಶಿರಸ್ತೇದಾರರುಗಳಾದ ವಾಯ್.ಎಂ.ತಳವಾರ, ಜ್ಯೋತಿ ಹಕಾರಿ, ಸುರೇಶ ಬಳಗಾನೂರ, ಎಸ್. ಎಂ.ಪೂಜಾರಿ ಹಾಗೂ ನ್ಯಾಯಾಲಯ ಸಿಬ್ಬಂದಿಗಳಾದ ಜ್ಯೋತಿ ಹೆಬ್ಬಾಳ, ನೀಲಮ್ಮ ಇಲಕಲ್ಲ, ಬಸವರಾಜ ಬೂದಿಹಾಳ, ಆಯ್.ಆರ್.ಹಿರೇಮಠ, ಪ್ರಸನ್ನ, ಅನಸೂಯಾ ಕರಡಿ, ರಾಮು ಕಮ್ಮಾರ, ನರ್ಮದಾ ಮರೋಳ, ಗೀತಾ ರಾಂಪೂರ್, ರೇಣುಕಾ ಜಾನಮಟ್ಟಿ, ಅಮೀದಾ ನದಾಫ್, ಮೀನಾಕ್ಷಿ ದೊಡಮನಿ, ಮಧು ಧರ್ಮಗಿರಿ, ನಾಗಮ್ಮ ಹೂಗಾರ, ಮಂಜುಳಾ ಹೊಸಮನಿ, ಬಸವರಾಜ ದಡ್ಡಿ, ಸಂಗು ರಡ್ಡಿ, ಮಹಾಂತೇಶ ಹಚ್ಚರೆಡ್ಡಿ, ಎನ್.ಬಿ.ಮದಿಹಳ್ಳಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಈ ಲೋಕ ಅದಾಲತ್ ಯಶಸ್ವಿಗೆ ಶ್ರಮಿಸಿದರು.

