ಸಿಂದಗಿಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಖೋ-ಖೋ ಆಟ ಪ್ರಾಚೀನ ಭಾರತೀಯ ಆಟವಾಗಿದ್ದು, ಮಹಾಭಾರತದಲ್ಲಿಯೂ ಇದರ ಉಲ್ಲೇಖವಿದೆ. ಖೋ-ಖೋ ಕೇವಲ ಮನರಂಜನೆಯಲ್ಲ. ಬದಲಾಗಿ ಶಿಸ್ತು ಮತ್ತು ದೈಹಿಕ ಸದೃಡತೆಯನ್ನು ಉತ್ತೇಜಿಸುವ ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ಸಿ.ಎಂ.ಮನಗೂಳಿ ಪದವಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ಸಿಂದಗಿ ನಗರದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಳ್ಳಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಪದ್ಮರಾಜ ಮಹಿಳಾ ಪದವಿ ಕಾಲೇಜು ಹಾಗೂ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಅಂತರ ಮಹಾವಿದ್ಯಾಲಯಗಳ ಖೋ-ಖೋ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ೨೦೨೫-೨೬ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಕ್ರೀಡೆ ಉತ್ತಮ ಆರೋಗ್ಯಕ್ಕೆ ರಹದಾರಿ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವುದರಿಂದ ಸದೃಢ ದೇಹ ಹಾಗೂ ಸದೃಢ ಮನಸ್ಸು ಹೊಂದಲು ಸಾಧ್ಯ. ದೈಹಿಕ ಚಟುವಟಿಕೆ, ಮಾನಸಿಕ ಕಸರತ್ತು ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸುವ ಭಾರತೀಯ ಪಾರಂಪರಿಕ ಆಟಗಳಲ್ಲಿ ಖೋ-ಖೋ ಆಟ ಅತ್ಯಂತ ಸೂಕ್ಷ್ಮತೆಯಿಂದ ಕೂಡಿದೆ ಎಂದರು.
ಈ ವೇಳೆ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ ನಡಕಟ್ಟಿ ಮಾತನಾಡಿ, ಸಂಸ್ಥೆಯ ಸಹ ಕಾರ್ಯದರ್ಶಿ ಅಶೋಕ ವಾರದ, ನಿರ್ದೇಶಕ ಡಾ.ವಿವೇಕಾನಂದ ಸಾಲಿಮಠ ಮಾತನಾಡಿ, ಖೋ-ಖೋ ಪಂದ್ಯಾವಳಿಯು ವೇಗ, ಚುರುಕುತನ ಮತ್ತು ಸಾಂಘಿಕ ಮನೋಭಾವವನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಆಟವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯೂ ಸಹ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಕ್ರೀಡೆಗಳು ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದರು.
ಈ ವೇಳೆ ಆಯ್ಕೆ ಸಮಿತಿ ಸದಸ್ಯ ಮಹಾಂತೇಶ ಲಾಯದಗುಂದಿ, ಶಿವಪ್ರಸಾದ ಎಲಿ ಹಾಗೂ ಶ್ರೀನಿವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೀಡಾಪಟುಳಿಗೆ ಶುಭ ಕೋರಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕ್ರೀಡಾ ಕೂಟದಲ್ಲಿ ರಾಜ್ಯದ ಸುಮಾರು ೧೪ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು, ಕ್ರೀಡಾಬಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಜಶೇಖರ ಕೂಚಬಾಳ, ಡಾ.ರವಿ ಗೋಲಾ, ಡಾ.ಶರಣಬಸವ ಜೋಗುರ, ಭೀಮನಗೌಡ ಸಿಂಗನಳ್ಳಿ, ವ್ಹಿ.ಡಿ.ಪಾಟೀಲ, ಕೆ.ಹೆಚ್.ಸೋಮಾಪುರ, ಎಸ್.ಎಸ್.ಮಲ್ಲೇದ, ಎಸ್.ಎಸ್.ಸಂಗಮ, ಗವಿಸಿದ್ದಪ್ಪ ಆನೆಗುಂದಿ, ಬಿ.ಜಿ.ಅವಟಿ, ಉಪನ್ಯಾಸಕರಾದ ಎಸ್.ಎಸ್.ಕಲಶೆಟ್ಟಿ, ಮಹಾಂತೇಶ ನೂಲಾನವರ, ಜಿ.ಎಸ್.ಕುಲಕರ್ಣಿ, ಯು.ಸಿ.ಪೂಜೇರಿ, ಎಸ್.ಸಿ.ದುದ್ದಗಿ, ಎ.ಆರ್.ರಜಪೂತ, ಎಸ್.ಎನ್.ಕುಂದಗೋಳ, ಎಂ.ಕೆ.ಬಿರಾದಾರ, ಭಾಗ್ಯ ಬಬಲೇಶ್ವರ, ಭಾಗ್ಯಶ್ರೀ ನಂದಿಮಠ, ನೀಲಮ್ಮ ಬಿರಾದಾರ, ಡಿ.ಎಂ.ಪಾಟೀಲ, ಮಂಗಳಾ ಈಳಗೇರ, ಮಮತಾ ಹರನಾಳ, ಶಿವಶಂಕರ ಕುಂಬಾರ, ಜಿ.ಎ.ನಂದಿಮಠ ಹೇಮಾ ಹಿರೇಮಠ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

