ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡುತ್ತಿರುವದು ಹಮ್ಮೆಯ ಸಂಗತಿ ಎಂದು ವಿಜಯಪುರದ ಶರಣಬಸವೇಶ್ವರ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷೆ ಭಾಗ್ಯಶ್ರೀ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ವಿಜಯಪುರದ ರೆಡ್ ಕ್ರಾಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ತಾಯಿಯಾಗಿ, ಮಗಳಾಗಿ ಸೊಸೆಯಾಗಿ ಹೇಗೆ ತನ್ನ ಪಾತ್ರವನ್ನು ನಿಭಾಯಿಸುತ್ತಾ ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತಾಳೆ ಎಂದರು.
ಶಿಕ್ಷಕಿ, ಸಾಹಿತಿ ಗಿರಿಜಾ ಪಾಟೀಲ ಮಾತನಾಡಿ, ಗಂಡು-ಹೆಣ್ಣು ಎಂಬುದು ಸೃಷ್ಟಿಯ ಭೇದ ಹೊರತು ಸಾಧನೆಯಲ್ಲಿ ಭೇದವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ತಾನೇನು ಕಡಿಮೆ ಇಲ್ಲದಂತೆ ಸಾಧಿಸಿದ್ದಾಳೆ. ಹೆಣ್ಣಿನ ಹಿರಿಮೆ, ಗರಿಮೆ ಸಂಸ್ಕೃತಿ , ಮಹಿಳೆಯ ಪದ್ಧತಿಯ ಕುರಿತು ಹೇಳಿದರು.
ಕಾರ್ಯಕ್ರಮದ ಅತಿಥಿ ಮೂರನಾಳರವರು ಮಾತನಾಡಿ, ಹೆಣ್ಣಿನ ಸಂಖ್ಯೆ ಪ್ರಪಂಚದಲ್ಲಿ ಹೇಗಿದೆ ಹೆಣ್ಣಿನ ಸ್ಥಾನಮಾನವೇನು ಎಂಬುದರ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರು ಡಾ. ನೀಲಪ್ಪ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸಂಚಾಲಕ ರೇಣುಕಾ ಅಂಬಲಿ ,ರೆಡ್ ಕ್ರಾಸ್ ಸಂಚಾಲಕ ಲೀಲಾವತಿ. ಸಿ. ಐಕ್ಯೂಎಸಿ ಸಂಚಾಲಕ ಅಮಿತ್ ಮಿರ್ಜಿ,ಶ್ರೀಶೈಲ ಬಳವಾಟ, ಪ್ರಿಯಾಂಕ ಜಿಂದೆ, ಇಸ್ಮಾಯಿಲ್ ಶಫಿವುಲ್ಲಾ, ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಇದ್ದರು.

